ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಾಗೂ ಡಾಜ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ವಿರುದ್ಧ ಅಮೆರಿಕದ ಜನ ಬೀದಿಗಿಳಿದಿದ್ದಾರೆ. ಸರ್ಕಾರಿ ಸಿಬ್ಬಂದಿ ಕಡಿತ ಹಾಗೂ ಸುಂಕ ಹೆಚ್ಚಳ ಸೇರಿದಂತೆ ಹಲವು ನೀತಿಗಳನ್ನು ವಿರೋಧಿಸಿ ಬೀದಿಗಿಳಿದು ದೇಶಾದ್ಯಂತ ಪ್ರತಿಭಟನೆ (US Protest) ನಡೆಸುತ್ತಿದ್ದಾರೆ.
Massive crowd at Boston’s city hall plaza for #HandsOff protest pic.twitter.com/pCmEg6JALN
— Wu Tang is for the Children (@WUTangKids) April 5, 2025
ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕಡಿತ, ವಿವಿಧ ದೇಶಗಳ ಮೇಲೆ ಪ್ರತಿ ಸುಂಕ ಹೆಚ್ಚಳ ಮತ್ತು ನಾಗರೀಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಹೂಸ್ಟನ್, ಫ್ಲೋರಿಡಾ, ಕೊಲೊರಾಡೋ ಮತ್ತು ಲಾಸ್ ಏಂಜಲೀಸ್ ಸೇರಿ ಹಲವು ಪ್ರಮುಖ ನಗರಗಳಲ್ಲಿ ಜನ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಇಂದು ಉದ್ಘಾಟನೆ
ಟ್ರಂಪ್ ಸರ್ಕಾರವು ಸಾವಿರಾರು ಫೆಡರಲ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಸಾಮಾಜಿಕ ಭದ್ರತಾ ಕಚೇರಿಗಳನ್ನು ಮುಚ್ಚುತ್ತಿದೆ. ವಲಸಿಗರನ್ನು ಗಡೀಪಾರು ಮಾಡಲು ಪ್ರಯತ್ನಿಸುತ್ತಿದೆ ಜೊತೆಗೆ ತೃತೀಯ ಲಿಂಗಿ ಸಮುದಾಯಕ್ಕೆ ನೀಡುತ್ತಿದ್ದ ರಕ್ಷಣೆಯನ್ನು ಕಡಿಮೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಧಿಕ್ಕಾರ ಹಾಕಿದ್ದಾರೆ. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ
ಇನ್ನೂ ನ್ಯೂಯಾರ್ಕ್‌ನಿಂದ ಹಿಡಿದು ಲಾಸ್ ಏಂಜಲೀಸ್‌ವರೆಗೂ 50 ರಾಜ್ಯಗಳ 1,200ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ʻಹ್ಯಾಂಡ್ಸ್ ಆಫ್ʼ ಎಂಬ ಅಭಿಯಾನ ನಡೆಸಿರುವ ಪ್ರತಿಭಟನಾಕಾರರು ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಟ್ರಂಪ್ ಹೇರುತ್ತಿರುವ ಸುಂಕಗಳು ನಮ್ಮ ದೇಶವನ್ನು ನಾಶ ಮಾಡುವ ಶಸ್ತ್ರಗಳಾಗಿವೆ ಎಂದು ಕೂಡ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?