ನವದೆಹಲಿ: ಮನೆಯ ಛಾವಣಿ ಮೇಲೆ ಐದು ವರ್ಷದ ಬಾಲಕಿಯ ಕೈಗಳನ್ನು ಆಕೆಯ ತಾಯಿಯೇ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬಾಲಕಿಗೆ ಕಿರುಕುಳ ನೀಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ, ಪೊಲೀಸರು ಬಾಲಕಿಯ ಕುಟುಂಬಸ್ಥರನ್ನು ಪತ್ತೆ ಹಚ್ಚಿದ್ದಾರೆ. ನಂತರ ಈ ಕುರಿತಂತೆ ತನಿಖೆ ನಡೆಸಿದಾಗ ಆಕೆಯ ತಾಯಿಯೇ ಶಿಕ್ಷೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪೋಷಕರಿಂದಲೇ ನನಗೆ ಸಾವು – ಹತ್ಯೆಗೂ ಮುನ್ನ ಪೊಲೀಸರಿಗೆ ಬರೆದ ಪತ್ರ ಔಟ್
Advertisement
Advertisement
ಈ ಘಟನೆ ಖಜೂರಿ ಖಾಸ್ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸಂಬಂಧ ಮಹಿಳೆಯನ್ನು ಪ್ರಶ್ನಿಸಿದ ಪೊಲೀಸರಿಗೆ, ತನ್ನ ಮಗಳು ಶಾಲೆಯ ಹೋಂ ವರ್ಕ್‍ನನ್ನು ಪೂರ್ಣಗೊಳಿಸದಿದ್ದಕ್ಕಾಗಿ ಕೇವಲ 5-7 ನಿಮಿಷಗಳ ಕಾಲ ಶಿಕ್ಷಿಸಿರುವುದಾಗಿ ಮಹಿಳೆ ತಿಳಿಸಿದ್ದಾರೆ.
Advertisement
After a video of a girl child tied up on the roof of a house surfaced on social media, all possible efforts were made by Delhi Police to ascertain her identity and circumstances. The family of the child has been identified and appropriate action initiated.#DelhiPoliceCares
— Delhi Police (@DelhiPolice) June 8, 2022
Advertisement
ಈ ವೀಡಿಯೋವನ್ನು ಪಕ್ಕದ ಮನೆಯವರು ಸೆರೆಹಿಡಿದಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಸಿಲಿನ ತಾಪ ಹೆಚ್ಚಾಗಿರುವ ಹೊತ್ತಿನಲ್ಲಿ ಬಾಲಕಿಯ ಕೈಯನ್ನು ಕಟ್ಟಿಹಾಕಿ ಮೇಲ್ಛಾವಣಿ ಮೇಲೆ ಆಕೆಯ ತಾಯಿ ಶಿಕ್ಷೆ ನೀಡಿರುವುದಾಗಿ ಟ್ವೀಟ್ ಮಾಡುವ ಮೂಲಕ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಕೂಡ ತಿಳಿಸಿದ್ದರು. ಇದನ್ನೂ ಓದಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕೆಲವರು ಬಾಲಕಿಗೆ ಜವಾಬ್ದಾರಿ ಬರಲು ಈ ರೀತಿ ಶಿಕ್ಷಿಸಿರುವುದು ಸರಿಯೇ ಎಂದರೆ, ಮತ್ತೆ ಕೆಲವರು ಇದೊಂದಿ ಅಮಾನವೀಯ ಘಟನೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.