ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ: ರಾಹುಲ್‌ ಗೆಲುವಿಗೆ ಜನರಲ್ಲಿ ಸೋನಿಯಾ ಗಾಂಧಿ ಮನವಿ

Public TV
2 Min Read
sonia gandhi Raebareli Rally

ಲಕ್ನೋ: ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ. ನಾನು ನೀಡಿದ ಪ್ರೀತಿಯನ್ನು ಅವನಿಗೆ ನೀವು ನೀಡಿ ಎಂದು ರಾಹುಲ್‌ ಗಾಂಧಿ ಪರ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಪ್ರಚಾರ ನಡೆಸಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ (Raebareli) ಸಾರ್ವಜನಿಕ ಸಭೆ ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಿ, ನಮ್ಮ ಕುಟುಂಬದ ಬೇರುಗಳು ಈ ನೆಲದ ಮಣ್ಣಿನೊಂದಿಗೆ ಸಂಪರ್ಕ ಹೊಂದಿವೆ. ಈ ಸಂಬಂಧವು ಗಂಗಾ ಮಾತೆಯಷ್ಟು ಪರಿಶುದ್ಧವಾಗಿದೆ. ನಮ್ಮ ಸಂಬಂಧವು ಅವಧ್ ಮತ್ತು ರಾಯ್‌ಬರೇಲಿಯ ರೈತರ ಆಂದೋಲನದಿಂದ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಬಳಿ ಅಣುಬಾಂಬ್ ಇದೆ ಆದ್ರೆ ಅದನ್ನು ನಿರ್ವಹಿಸಲು ಹಣವಿಲ್ಲ: ಪ್ರಧಾನಿ ಮೋದಿ

Sonia Gandhi And Rahul Gandhi

ದುರ್ಬಲರನ್ನು ರಕ್ಷಿಸಿ, ನ್ಯಾಯದ ವಿರುದ್ಧ ಹೋರಾಡಿ ಮತ್ತು ಪವಿತ್ರವಾಗಿರಿ. ಇದು ಇಂದಿರಾಗಾಂಧಿ ಅವರ ಬೋಧನೆಯಾಗಿದೆ. ಅವರು ಕೆಲಸ ಮಾಡುವುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ನನ್ನ ಅವಧಿಯಲ್ಲೂ ಇದೇ ಸಿದ್ಧಾಂತವನ್ನು ಪಾಲಿಸಿದ್ದೇನೆ. ನಿಮ್ಮ ಪ್ರೀತಿ ನನ್ನ ಏಕಾಂಗಿ ಎನಿಸಲು ಬಿಡಲಿಲ್ಲ. ನನ್ನ ಬಳಿ ಇರುವುದೆಲ್ಲ ನಿಮ್ಮದೇ. ಈಗ ನನ್ನ ಮಗನನ್ನು ನಿಮಗೆ ನೀಡುತ್ತಿದ್ದೇನೆ. ನಾನು ನೀಡಿದಂತೆ ಅವನಿಗೂ ನೀವು ಪ್ರೀತಿ ನೀಡಿ. ರಾಹುಲ್ ನಿಮ್ಮನ್ನು ಎಂದಿಗೂ ನಿರಾಶೆ ಮಾಡುವುದಿಲ್ಲ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಇಂದಿರಾ ಗಾಂಧಿ ಮತ್ತು ರಾಯ್‌ಬರೇಲಿ ಜನರು ನನಗೆ ಕಲಿಸಿದ ಪಾಠವನ್ನೇ ನಾನು ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಕಲಿಸಿದೆ. ಎಲ್ಲರನ್ನೂ ಗೌರವಿಸಲು, ದುರ್ಬಲರನ್ನು ರಕ್ಷಿಸಲು, ಜನರ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಹೋರಾಡಲು ಭಯಪಡಬೇಡಿ. ಏಕೆಂದರೆ ನಿಮ್ಮ ಹೋರಾಟದ ಬೇರುಗಳು ಮತ್ತು ಸಂಪ್ರದಾಯಗಳು ತುಂಬಾ ಆಳವಾಗಿವೆ ಎಂದು ತಮ್ಮ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ನಾಚಿಕೆಯಿಲ್ಲದೆ ಆರೋಪಿಯೊಂದಿಗೆ ತಿರುಗಾಡುತ್ತಿದ್ದಾರೆ: ಮಲಿವಾಲ್‌ ಹಲ್ಲೆಗೆ ಸೀತಾರಾಮನ್ ಕಿಡಿ

ಬಹಳ ದಿನಗಳು ನಿಮ್ಮ ನಡುವೆ ಇರುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ತುಂಬು ಹೃದಯದಿಂದ ನಾನು ನಿಮಗೆ ಕೃತಜ್ಞಳಾಗಿದ್ದೇನೆ. ನನ್ನ ತಲೆ ನಿಮ್ಮ ಮುಂದೆ ಗೌರವದಿಂದ ಬಾಗುತ್ತದೆ. 20 ವರ್ಷಗಳ ಕಾಲ ಸಂಸದೆಯಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದೀರಿ. ಇದು ನನ್ನ ಜೀವನದ ದೊಡ್ಡ ಆಸ್ತಿ ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಯ್‌ಬರೇಲಿ ನನ್ನ ಕುಟುಂಬ. ಅದೇ ರೀತಿ ಅಮೇಥಿ ಕೂಡ ನನ್ನ ಮನೆ. ನನ್ನ ಜೀವನದ ನವಿರಾದ ನೆನಪುಗಳು ಈ ಸ್ಥಳದೊಂದಿಗೆ ಸಂಬಂಧಿಸಿರುವುದು ಮಾತ್ರವಲ್ಲದೆ ನಮ್ಮ ಕುಟುಂಬದ ಬೇರುಗಳು ಕಳೆದ 100 ವರ್ಷಗಳಿಂದ ಈ ಮಣ್ಣಿನೊಂದಿಗೆ ಸಂಪರ್ಕ ಹೊಂದಿವೆ. ಗಂಗಾಮಾತೆಯಂತೆ ಪವಿತ್ರವಾದ ಈ ಸಂಬಂಧವು ಅವಧ್ ಮತ್ತು ರಾಯ್‌ಬರೇಲಿಯ ರೈತರ ಚಳವಳಿಯಿಂದ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Share This Article