ಮಾಸ್ಟರ್ ಶೆಫ್ ಇಂಡಿಯಾ 2023ರ (Master Chef India) ಸ್ಪರ್ಧೆಯಲ್ಲಿ ಬೆಂಗಳೂರಿನ ಕರಕುಶಲ ಉದ್ಯಮಿ ಭಾಗಿಯಾಗಿದ್ದಾರೆ. ಜೊತೆಗೆ ಟಾಪ್ 12 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಹರೀಶ್ (Harish ClosePet) ನಡೆಸುತ್ತಿರುವುದು ʻಇಟ್ಸಿ ಬಿಟ್ಸಿʼ ಅನ್ನೋ ಕರಕುಶಲ ವಸ್ತುಗಳ ಮಳಿಗೆಯ ಸರಣಿಯ ಜೊತೆಗೆ ಬಿಡುವಿದ್ದಾಗ ಮಗಳಿಗೆ ಲಂಚ್ ಬಾಕ್ಸ್‌ಗೆ ಹಾಕಿಕೊಡಲು ಸರಳವಾದ ವೈವಿಧ್ಯಮಯ ಅಡುಗೆ ಮಾಡುವುದನ್ನು ರೂಢಿಸಿಕೊಂಡಿದ್ದರಂತೆ. ಈ ಹವ್ಯಾಸವೇ ಬೆಂಗಳೂರಿನ ಈ ಉದ್ಯಮಿಯನ್ನು ಸೋನಿ ಟಿವಿಯ ʻಮಾಸ್ಟರ್ ಶೆಫ್ ಇಂಡಿಯಾʼ ಅಡುಗೆ ಸ್ಪರ್ಧೆಯ ಟಾಪ್ 12ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆ ಮಾಡಿದೆ.
Advertisement
ಹರೀಶ್ ಕ್ಲೋಸ್‌ಪೇಟ್ ಅವರೇ ಇಂತಹ ಒಂದು ಅಪರೂಪದ ಸಾಧನೆ ಮಾಡಿರುವ ಕನ್ನಡಿಗ. ಅನೇಕ ಸುತ್ತುಗಳ ಕಠಿಣ ಆಡಿಷನ್‌ಗಳ ನಂತರ ಮಾಸ್ಟರ್ ಶೆಫ್ ಇಂಡಿಯಾ ಟಾಪ್ -12 ರಲ್ಲಿ ಆಯ್ಕೆಯಾಗಿ ಬೆಂಗಳೂರಿನ ಹೆಸರಿಗೆ ಇನ್ನೊಂದು ಗರಿ ಮೂಡಿಸಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸ ಕಾರ್ಯವಿದ್ದರೂ, ಬಿಡುವಿದ್ದಾಗ ಮಗಳ ಕಾಲೇಜು ಲಂಚ್‌ಬಾಕ್ಸ್‌ಗಾಗಿ ಹರೀಶ್ ಅಡುಗೆ ಮಾಡಿ ಕಳಿಸುತ್ತಿದ್ದರಂತೆ. ಹಾಗೆಯೇ ಅಡುಗೆ ಮಾಡುವಾಗಿ ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಐಡಿಯಾ ಬಂತು. 2022 ರಲ್ಲಿ ʻಹ್ಯಾರಿಸ್ ಲಂಚ್‌ಬಾಕ್ಸ್ʼ ಅನ್ನೋ ಸೋಷಿಯಲ್ ಮೀಡಿಯಾ ಖಾತೆ ಶುರುಮಾಡಿದರು. ಮಗಳ ಊಟದ ಡಬ್ಬಿಗೆ ಮಾಡಿ ಕಳಿಸುತ್ತಿದ್ದ ಅಡುಗೆಗಳನ್ನ ಚಿತ್ರೀಕರಿಸಿ ಅಪ್ ಲೋಡ್ ಮಾಡುತ್ತಿದ್ದರಂತೆ. ಹರೀಶ್ ಅವರು ತಯಾರಿಸುತ್ತಿದ್ದ ವಿವಿಧ ಪಾಕಗಳು, ಅವುಗಳ ವೈಶಿಷ್ಟ್ಯತೆ ಹಾಗೂ ಸರಳತೆಯಿಂದಾಗಿ ಗಮನ ಸೆಳೆದಿವೆ.
Advertisement
Advertisement
ಉದ್ಯಮ ಸಂಬಂಧಿ ಪ್ರವಾಸಕ್ಕೆ ಹೋದಾಗ ದೇಶ ವಿದೇಶಗಳಲ್ಲಿ ಸವಿಯುವ ಅಡುಗೆ ಮಾಡುವ ವಿಧಾನ ತಿಳಿದುಕೊಂಡೇ ಬರುತ್ತಿದ್ದರಂತೆ. ಅದನ್ನು ತಮ್ಮದೇ ವಿಧಾನದಲ್ಲಿ ಪ್ರಯೋಗಿಸುತ್ತಿದ್ದರು. ಇದು ಹೊಸದೊಂದು ಪಾಕಲೋಕದ ಬಾಗಿಲು ತೆರೆಯಬಲ್ಲದು ಎಂದು ಆಗ ಅವರೂ ಊಹಿಸಿರಲಿಲ್ಲವಂತೆ. ಜೊತೆಗೆ ತಂದೆ ಮಗಳ ಬಾಂಧವ್ಯವೂ ವೀಕ್ಷಕರಿಗೆ ಇಷ್ಟವಾಗಿದೆ. ಕಡಿಮೆ ಅವಧಿಯಲ್ಲಿ ʻಹ್ಯಾರಿಸ್ ಲಂಚ್‌ಬಾಕ್ಸ್ʼ ವೈರಲ್ ಆಯಿತು. ಹರೀಶ್ ಕ್ಲೋಸ್‌ಪೇಟ್ ಸೋನಿ ಟಿವಿಯ ʻಮಾಸ್ಟರ್ ಶೆಫ್ʼ ಪ್ರಕಟಣೆ ಹೊರಬಿದ್ದಾಗ ಆಡಿಷನ್ ಕೊಟ್ಟು ಒಂದು ಕೈ ನೋಡೇಬಿಡೋಣ ಅಂತ ನಿರ್ಧರಿಸಿದರಂತೆ. ಅಲ್ಲಿ ವಿವಿಧೆಡೆ ಪಂಚತಾರಾ ಹೊಟೆಲ್‌ಗಳಲ್ಲಿ ಮಾಡುವಂಥ ಅಡುಗೆ ಕಲಿತವರು ಬರುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಆದರೂ ಧೈರ್ಯ ಮಾಡಿ ಮಗಳು, ಪತ್ನಿ ಹಾಗೂ ಕಂಪನಿಯ ನೌಕರರ ಬೆಂಬಲದೊಂದಿಗೆ ಮುನ್ನುಗಿದರು. ಅಚ್ಚರಿ ಎಂಬಂತೆ ಅನೇಕ ಕಠಿಣ ಸವಾಲುಗಳ ನಡುವೆ ಟಾಪ್ 12 ಕ್ಕೆ ಆಯ್ಕೆ ಆಗಿ ಇತಿಹಾಸ ನಿರ್ಮಿಸಿದ್ದಾರೆ.
Advertisement
ʻಅಡುಗೆ ಮಾಡುವಾಗ ಯಾವುದನ್ನೂ ಅಳೆದು ಅಳೆದು ಹಾಕಬಾರದು. ಅಡುಗೆಯನ್ನು ಖುಷಿಯಿಂದ ಮಾಡಬೇಕು. ಜೊತೆಗೆ ಪ್ರೀತಿಯಿಂದ ಮಾಡುವ ಅಡುಗೆಗೆ ರುಚಿ ಜಾಸ್ತಿ. ಅದೇ ನನ್ನ ಯಶಸ್ಸಿನ ಗುಟ್ಟು ʼ ಎನ್ನುತ್ತಾರೆ ಹರೀಶ್ ಕ್ಲೋಸ್‌ಪೇಟ್. ಇತರ ಸ್ಪರ್ಧಿಗಳ ನಡುವೆ ವೀಕ್ಷಕರು ಹೆಚ್ಚು ಹೆಚ್ಚು ಓಟ್ ಮಾಡಿದರೆ ಅಂತಿಮ ಸುತ್ತಿನವರೆಗೂ ಹೋಗುವ ಅವಕಾಶ ಸಿಗುತ್ತದೆ. ಕರ್ನಾಟಕದ ವೀಕ್ಷಕರು ಕಾರ್ಯಕ್ರಮ ನೋಡಿ ಓಟ್ ಮಾಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ತನಗಿದೆ ಎನ್ನುವುದು ಹರೀಶ್ ಮಾತು.
Web Stories