ಕೋಲಾರ: ಕೋಲಾರದಲ್ಲಿ (Kolar) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಘೋಷಣೆಯಾಗುತ್ತಿದ್ದಂತೆ ದಲಿತ ಸಿಎಂ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ದಲಿತ ಮುಖಂಡರು ಕೋಲಾರದಲ್ಲಿ ದಲಿತ ಮತದಾರರ ಜಾಗೃತಿ ಅಭಿಯಾನದ ಮೂಲಕ ನಗರದೆಲ್ಲೆಡೆ ದಲಿತ ಮತದಾರರ ಜಾಗೃತಿ ಅಭಿಯಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
Advertisement
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ (JDS) ಮುಖಂಡ ಬಾಲಾಜಿ ಚನ್ನಯ್ಯ, ದಲಿತ ಮುಖಂಡರು ದಲಿತ ಮತದಾರರ ಜಾಗೃತಿ ಅಭಿಯಾನ (Dalit CM Campaign) ಹಮ್ಮಿಕೊಂಡಿದ್ದಾರೆ. ಕರ ಪತ್ರಗಳ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಇದು ಬರಿ ಕೋಲಾರ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಅಭಿಯಾನ ಮಾಡುತ್ತೇವೆ. ದಲಿತರನ್ನು ಹಂತ ಹಂತವಾಗಿ ಮುಗಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ದಲಿತ ಮುಖ್ಯಮಂತ್ರಿ ಹಾದಿ ಸುಲಭಗೊಳಿಸುವುದು, ದಲಿತ ಮತದಾರರ ಜಾಗೃತಿ ಅಭಿಯಾನ ಮಾಡುವ ಮೂಲಕ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಲಾಗುವುದು ಎಂಬ ಸಂದೇಶವನ್ನು ರವಾನೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಜನರ ವಿಶ್ವಾಸ ಸಂಪಾದನೆ ಮಾಡುವಲ್ಲಿ ಪಕ್ಷ ಯಶಸ್ಸು ಕಂಡಿದೆ: ಅಶ್ವಥ್ ನಾರಾಯಣ್
Advertisement
Advertisement
ದಲಿತ ನಾಯಕರನ್ನು ಸೋಲಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಎಂದು ದಲಿತ ಮತದಾರರ ಬಳಿ ಜಾಗೃತಿ ಮೂಡಿಸಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಿ ದಲಿತ ಮುಖ್ಯಮಂತ್ರಿ ಹಾದಿ ಸುಗಮಗೊಳಿಸಿ ಅನ್ನೋ ಮನವಿ ಇರುವ ಕರ ಪತ್ರವನ್ನು ಹಂಚುತ್ತಿರುವ ಮುಖಂಡರು, ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ಕೋಲಾರದಲ್ಲಿ ದಲಿತರು ಸ್ವಾಭಿಮಾನ ಮೆರೆಯೋಣ ಅನ್ನೋ ಮನವಿಯನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ: ಬಿಎಸ್ವೈ
Advertisement
ರಾಜ್ಯದಲ್ಲಿ ದಲಿತ ನಾಯಕರಾಗಿದ್ದ ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸ ಪ್ರಸಾದ್, ಧ್ರುವನಾರಾಯಣ್, ಕೆ.ಹೆಚ್.ಮುನಿಯಪ್ಪರನ್ನು ಬದಿಗೊತ್ತಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ದಲಿತ ಸಮುದಾಯ ಕಾಂಗ್ರೆಸ್ನ್ನು ಬೆಂಬಲಿಸಿಕೊಂಡು ಬಂದಿದ್ದು ಈವರಗೂ ಯಾರನ್ನು ದಲಿತ ಸಿಎಂ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಲು ದಲಿತರಿಗೆ ಸಿಎಂ ಸ್ಥಾನ ಕೈ ತಪ್ಪುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಸೋತರೆ ಕಾಂಗ್ರೆಸ್ನಲ್ಲಿ ದಲಿತರು ಸಿಎಂ ಆಗುವ ಸಾಧ್ಯತೆಯಿದೆ ಎಂದು ಸಾರ್ವಜನಿಕರಿಗೆ ಕರ ಪತ್ರ ಹಂಚಿ ಸಿದ್ದರಾಮಯ್ಯರನ್ನು ಸೋಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k