ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಮಧ್ಯೆ ಮತ್ತೆ ಸಿಡಿ ಕದನ ಶುರುವಾಗಿದೆ. ಸಿಡಿ ಕೇಸ್ (CD Case) ಮುನ್ನೆಲೆಗೆ ತರುವ ಮೂಲಕ ಡಿಕೆಶಿ ಹಣಿಯಲು ರಮೇಶ್ ಜಾರಕಿಹೊಳಿ ಹೊಸ ಪ್ಲಾನ್ ಮಾಡಿದ್ದಾರೆ.
Advertisement
ಸಿಡಿ ಕೇಸ್ ಸಿಬಿಐಗೆ ಕೊಡುವಂತೆ ಹಳೆಯ ಆಗ್ರಹಕ್ಕೆ ಮತ್ತೆ ಮರುಜೀವ ಕೊಟ್ಟಿದ್ದಾರೆ. ಈ ಮೂಲಕ ಡಿಕೆಶಿ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ಸಾಹುಕಾರ್ ಧುಮುಕಿದ್ದಾರೆ. ಸಿಡಿ ಕೇಸನ್ನು ಸಿಬಿಐಗೆ (CBI) ಕೊಡಿಸಿ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಫ್ಯಾಕ್ಸ್ ಮೂಲಕ ಸಿಎಂಗೆ ಪತ್ರ ಕಳಿಸಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದಾರೆ. ಇಲ್ಲದಿದ್ರೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‍ಗೆ ಹೋಗೋದಾಗಿಯೂ ಜಾರಕಿಹೊಳಿ ವಾನಿರ್ಂಗ್ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹೆಸರು ಕೆಡಿಸಿದ್ದಕ್ಕೆ ಬರಗಾಲ ಬಂದಿದೆ: ರಮೇಶ್ ಜಾರಕಿಹೊಳಿ
Advertisement
Advertisement
ಬಿಜೆಪಿ ಸರ್ಕಾರ ಇದ್ದಾಗಲೂ ಸಿಡಿ ಕೇಸ್ ಸಿಬಿಐಗೆ ಕೊಡುವಂತೆ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಆದ್ರೆ ಅಂದು ಅದು ಆಗಿಲ್ಲ, ಈಗ ಮತ್ತೆ ಅದೇ ಒತ್ತಾಯ ಮಾಡಿದ್ದಾರೆ.
Advertisement
Web Stories