Bengaluru CityDistrictsKarnatakaLatestMain Post

ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ – ಬಿಜೆಪಿ ಗೇಲಿ

ಬೆಂಗಳೂರು: ಒಂದೆಡೆ ಅಭಿವೃದ್ಧಿ ವಿಷಯದ ಚರ್ಚೆ ಆದರೆ ಮತ್ತೊಂದೆಡೆ ಅಕ್ಕಿ ಸಮರ. ಬಿಜೆಪಿ ಟ್ವಿಟರ್‍ನಲ್ಲಿ ಸರಣಿ ಟ್ವೀಟ್ ಮಾಡಿ ಟೀಕಿಸಿದೆ.

ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಸಿದ್ದರಾಮಯ್ಯ ಸಾಧನೆ. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಪ್ರತಿ ಪ್ರಜೆ ಮೇಲೆ 44 ಸಾವಿರಕ್ಕೂ ಹೆಚ್ಚು ಸಾಲದ ಹೊರೆ ಹೇರಿದ್ದೀರಿ. ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ..? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ? ಘೋಷಣೆ ಮಾಡಿದ ಮಾತ್ರಕ್ಕೆ ಮನೆ ರ್ಮಾಣವಾಗುತ್ತದೆಯೇ..? ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ .. ಬುರುಡೆರಾಮಯ್ಯ ಅಂತ ಬಿಜೆಪಿ ಛೇಡಿಸಿದೆ. ಇದನ್ನೂ ಓದಿ: ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ: ಸಿದ್ದರಾಮಯ್ಯ

ಈ ಬೆನ್ನಲ್ಲೇ ಸಿದ್ದರಾಮಯ್ಯ ಪ್ರತಿಕಾ ಪ್ರಕಟಣೆಯನ್ನೇ ಹೊರಡಿಸಿದ್ದಾರೆ. 2013ರಲ್ಲಿ ಅನ್ನಭಾಗ್ಯ ಯೋಜನೆ ತಂದು, ಪ್ರತಿ ಕುಟುಂಬಕ್ಕೆ 35 ಕೆಜಿ ಅಕ್ಕಿಯನ್ನು ಕೆಜಿಗೆ ಕೇವಲ 1 ರೂ.ಗೆ ನೀಡಿದ್ದೇವೆ. 2017 ಏಪ್ರಿಲ್‍ನಿಂದ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಬೇಳೆ ವಿತರಿಸಿದ್ವಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಅಕ್ಕಿಯನ್ನು 2 ಕೆಜಿಗೆ ಇಳಿಸಿದೆ ಅಂತ ವಿವರಣೆ ನೀಡಿದ್ದಾರೆ. ಜೊತೆಗೆ ಹಾನಗಲ್‍ನಲ್ಲಿ ಮಾತಾಡಿ, ನನ್ನ ಯೋಜನೆ ಜನರಿಗೆ ತಲುಪಿಲ್ಲ ಅಂತಾರೆ. ನಾನು ಕೊಟ್ಟ 7 ಕೆಜಿ ಅಕ್ಕಿ ನಿಮಗೆ ತಲುಪಿಲ್ವಾ..? ಅಂತ ಹಾನಗಲ್ ಜನಕ್ಕೆ ಸಿದ್ದರಾಮಯ್ಯ ಪ್ರಶ್ನಿಸಿದಾಗ.. ನಮಗೆ ಸಿಕ್ಕಿದೆ ಅಂತ ಜನ ಉತ್ತರ ಹೇಳಿದ್ದಾರೆ. ಇದನ್ನೂ ಓದಿ:  ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

Leave a Reply

Your email address will not be published.

Back to top button