DistrictsHaveriKarnatakaLatestMain Post

ಉದಾಸಿ, ಸಜ್ಜನರ್ ಸೇರಿ ಖಾಲಿ ಚೀಲಗಳನ್ನೂ ಬಿಡದಂತೆ ಸಕ್ಕರೆ ಕಾರ್ಖಾನೆ ನುಂಗಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಸಂಗೂರಿನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಇತ್ತು. ಆಗ ಉದಾಸಿ ಅಧ್ಯಕ್ಷ ಆಗಿದ್ದರು, ಶಿವರಾಜ್ ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಇಬ್ಬರೂ ಸೇರಿ ಖಾಲಿ ಚೀಲಗಳನ್ನೂ ಬಿಡದಂತೆ ಸಹಕಾರಿ ಸಕ್ಕರೆ ಕಾರ್ಖಾನೆ ನುಂಗಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರಿ ಸಕ್ಕರೆ ಕಾರ್ಖಾನೆ ಹಾಳಾಗಲು ಮಿಸ್ಟರ್ ಸಜ್ಜನರ್ ಕಾರಣ. ಸಜ್ಜನ್ ಈಗ ಬಿಜೆಪಿ ಅಭ್ಯರ್ಥಿ ಅವರಿಗೆ ವೋಟು ಹಾಕಬೇಡಿ, ಅವನಿಗೆ ಖಾಲಿ ಚೀಲ ಕೊಟ್ಟು ಕಳುಹಿಸಿ, ಹಿಂದೆ ತಿಂದಿದ್ದನ್ನೆಲ್ಲ ಈಗ ಕಕ್ಕಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ- ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

ಇದು ಸಾರ್ವತ್ರಿಕ ಚುನಾವಣೆಯಲ್ಲ, ಈ ಚುನಾವಣೆಯಲ್ಲಿ ಶ್ರೀನಿವಾಸ ಮಾನೆಯವರಿಗೆ ಆಶೀರ್ವಾದ ಮಾಡಬೇಕು. ಸಾರ್ವತ್ರಿಕ ಚುನಾವಣೆ 2023ರಲ್ಲಿ ನಡೆಯುತ್ತದೆ. ಶಾಸಕರಾಗಿದ್ದ ಉದಾಸಿಯವರು ಅಗಲಿದ ಮೇಲೆ ಅವರ ಜಾಗ ಭರ್ತಿ ಮಾಡಲು ಉಪಚುನಾವಣೆ ಬಂದಿದೆ. ಈ ಚುನಾವಣೆ ಬರಲಿ ಎಂದು ಯಾರು ಕೂಡ ಬಯಸಿರಲಿಲ್ಲ. ಉದಾಸಿಯವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕೇವಲ ಆರು ಸಾವಿರ ಮತಗಳಿಂದ ಸೋತರು. ಸೋತ ನಂತರವೂ ಶ್ರೀನಿವಾಸ ಮಾನೆ ನಿರಂತರವಾಗಿ ನಿಮ್ಮ ಜೊತೆಗಿದ್ದು, ತಮ್ಮ ಕೈಲಾದ ಸಹಾಯ ಮಾಡಿದ್ದಾರೆ ಎಂದರು.

ಕ್ಷೇತ್ರದ ಶಾಸಕರಾಗಿದ್ದ ಉದಾಸಿಯವರು ಹಾಸಿಗೆ ಹಿಡಿದರು. ಅವರ ಮಗ ಸಂಸದರಾಗಿದ್ದರೂ ಕೂಡ ಈ ಕ್ಷೇತ್ರದ ಕಡೆಗೆ ತಲೆ ಹಾಕಲಿಲ್ಲ. ನಮ್ಮ ಅಭ್ಯರ್ಥಿ ಆಗಿರುವ ಮಾನೆ ಕೊರೊನಾ ಕಷ್ಟಕಾಲದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅದು ಅವರ ಕೆಲಸ ಆಗಿರಲಿಲ್ಲ ಆದರೂ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಪ್ರಕರಣ ದಾಖಲು

Leave a Reply

Your email address will not be published.

Back to top button