ಮೈಸೂರು: ಇಂದು ಕನ್ನಡ ಚಿತ್ರರಂಗ (Kannada Film Industry) ದಿಕ್ಕು ತಪ್ಪಿಹೋಗಿದೆ. ಪ್ಯಾನ್ ಇಂಡಿಯಾ ವ್ಯಾಪಾರದ ಸೋಗು ಬಂದಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ವಿಷಾದ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ (Mysuru) ಮಾಧ್ಯಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಕನ್ನಡ ಚಲನಚಿತ್ರ ಚುಕ್ಕಾಣಿಯೇ ಇಲ್ಲದ ಹಡಗಾಗಿದೆ. ದೊಡ್ಡ-ದೊಡ್ಡ ಮಹನೀಯರು ಸಂಸ್ಥೆ ಕಟ್ಟಿದ್ದಾರೆ. ಮೊದಲು ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ಮೂರೂ ವಲಯವನ್ನ ಒಗ್ಗಟ್ಟಿನ ತ್ರಿಶೂಲವಾಗಿಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ಇವತ್ತು ಪ್ಯಾನ್ ಇಂಡಿಯಾದ (Pan India) ವ್ಯಾಪಾರದ ಸೋಗು ಬಂದಿದೆ. ಕನ್ನಡ ಚಿತ್ರರಂಗ ದಿಕ್ಕು ತಪ್ಪಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯː ಹಂಸಲೇಖ
ಮುಂದುವರಿದು, ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನ ಕಟ್ಟಿಕೊಂಡು ಎಲ್ಲರ ಜೊತೆಯಲ್ಲಿ ಬದುಕಬೇಕಾ? ಎನ್ನುವ ದೊಡ್ಡ ತಾಪತ್ರೆಯ ಬಂದಿದೆ. ಈ ಹಿಂದೆ ಒಬ್ಬ ಹಿರೋ ಪ್ರತಿ ಕನ್ನಡ ಚಿತ್ರದಲ್ಲಿ ಕನ್ನಡದ ಹಾಡು ಇರುತ್ತಿತ್ತು. ಈಗ ಕನ್ನಡದ ಹಾಡು ಹೇಳಲು ಹೆದರುತ್ತಿದ್ದಾರೆ. ಏಕಂದರೆ ಇಲ್ಲಿ ಹಾಡಿದ ಹಾಡು ಅಲ್ಲಿ ಸಲ್ಲುವುದಿಲ್ಲ. ಅಲ್ಲಿ ಹಾಡಿದ ಹಾಡು ಇಲ್ಲಿ ಸಲ್ಲುವುದಿಲ್ಲ. ಹೀಗಾಗಿ ಬರೀ ಆಕ್ಷನ್ ನೇ ರಿಯಾಕ್ಷನ್ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿನಿಮಾ ರಿಲೀಸ್ ಬಳಿಕ ಮಹಿಳಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಅನುಷ್ಕಾ ಶೆಟ್ಟಿ
ಸಿನಿಮಾಗಳಲ್ಲಿ ಸಂಬಂಧಗಳು ಯಾವುದೂ ಇರುವುದಿಲ್ಲ. ಬರೀ ಹೊಡಿ ಬಡಿ, ಕಿವಿ ಮುಚ್ಚುವ ರೀತಿ ಸಂಗೀತ ಇದು ಎಲ್ಲಾ ಭಾಷೆಗಳಲ್ಲಿ ಮ್ಯಾಚ್ ಆಗುತ್ತೆ ಅಂಥ ತಿಳಿದುಕೊಂಡಿದ್ದಾರೆ. ಕನ್ನಡದಲ್ಲಿ ಹೊಸ ನಿರ್ದೇಶಕರು 250 ಜನ ಇದ್ದರೆ, ಹೊಸ ನಿರ್ಮಾಪಕರು 500 ಜನ ಇದ್ದಾರೆ. ಇವರಾರಿಗೂ ನಮ್ಮ ಚೇಂಬರ್‌ನ ಸಂಪರ್ಕವೇ ಇಲ್ಲ. ಎಲ್ಲರನ್ನ ಕರೆದು ಚರ್ಚೆ ಮಾಡುವವರೇ ಇಲ್ಲದಂತಾಗಿದೆ. ಮುಂದಿನ ದಿನದಿನದಲ್ಲಿ ಯಾರಾದರೂ ಬಂದು ಆ ಚುಕ್ಕಾಣಿಯನ್ನ ಹಿಡಿಯಬೇಕು. ಸಂಸ್ಕೃತಿ ಮಾರ್ಗದಲ್ಲಿ, ಕನ್ನ ಮಾರ್ಗದಲ್ಲಿ ಕನ್ನಡ ಚಿತ್ರರಂಗವನ್ನ ನಡೆಸುವಂತಾಗಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ‘ಜವಾನ್’ ಬಾಕ್ಸ್ ಆಫೀಸ್ ಕಲೆಕ್ಷನ್: ಈವರೆಗೂ ಹರಿದು ಬಂದ ಹಣವೆಷ್ಟು?
Web Stories