ಬಿಗ್ ಬಾಸ್ (BBK 11) ಮನೆಯ ಆಟ ರಂಗೇರಿದೆ. ಯಮುನಾ ಬಳಿಕ ಬಿಗ್ ಬಾಸ್ ಮನೆಯಿಂದ ಹಂಸ (Hamsa) ಔಟ್ ಆಗಿದ್ದಾರೆ. ಹಂಸ ಅವರ ದೊಡ್ಮನೆಯ ಆಟಕ್ಕೆ ಬ್ರೇಕ್ ಹಾಕಿದ್ದಾರೆ.
ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಆಕ್ಟೀವ್ ಆಗಿದ್ದ ನಟಿ ಹಂಸ ಅವರು ನರಕವಾಸಿ ರಂಜಿತ್ ಆಟದಿಂದ ಮನೆಯ ಕ್ಯಾಪ್ಟನ್ ಆಗಿದ್ದರು. ಈಗ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ.
ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಎರಡು ಕಾರ್ ಗಳು ಮನೆಗೆ ಎಂಟ್ರಿ ಕೊಟ್ಟಿದ್ದು, ಬಾಟಮ್ ಎರಡಲ್ಲಿ ಕಡೆಯದಾಗಿ ಹಂಸ, ಮೋಕ್ಷಿತಾ ಪೈ ಉಳಿದುಕೊಂಡಿದ್ದರು. 9 ಸ್ಪರ್ಧಿಗಳಲ್ಲಿ ಕಡೆಯದಾಗಿ ಇವರಿಬ್ಬರೂ ಉಳಿದುಕೊಂಡಿದ್ದರು. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಒಂದು ಕಾರಿನಲ್ಲಿ ಹಂಸ, ಮತ್ತೊಂದು ಕಾರಿನಲ್ಲಿ ಮೋಕ್ಷಿತಾ ಪೈ ಅವರನ್ನು ಕೂರಿಸಿಕೊಂಡು ಮನೆಯಿಂದ ಹೊರಗೆ ಹೋಯಿತು. ಸ್ವಲ್ಪ ಸಮಯ ಬಳಿಕ ಎಂಟ್ರಿ ಕೊಟ್ಟ ಕಾರಿನಲ್ಲಿ ಮೋಕ್ಷಿತಾ ಇದ್ದರು. ಅಲ್ಲಿಗೆ ಈ ವಿಭಿನ್ನ ಎಲಿಮಿನೇಷನ್ ನಲ್ಲಿ ಹಂಸ ಔಟ್ ಆಗಿದ್ದಾರೆ ಅನ್ನೋದು ಅಧಿಕೃತವಾಯಿತು.
ಈ ಎಲಿಮಿನೇಷನ್ ನಂತರ ಅಸಲಿ ಆಟ ಶುರು ಅಂತ ಮೋಕ್ಷಿತಾ ಸವಾಲು ಹಾಕಿದ್ದಾರೆ. ತನ್ನನ್ನು ಟಾರ್ಗೆಟ್ ಮಾಡೋರಿಗೆ ನಟಿ ಎಚ್ಚರಿಕೆ ನೀಡಿದ್ದಾರೆ.