ಬಳ್ಳಾರಿ: ಹಂಪಿ ಉತ್ಸವ ಮತ್ತೆ ಮುಂದಕ್ಕೆ ಹೋಗುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ. ಇದೇ ಜನವರಿ 12ರಂದು ಆರಂಭವಾಗಬೇಕಿರುವ ಉತ್ಸವಕ್ಕೆ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡದೇ ಹಿಂದೇಟು ಹಾಕುತ್ತಿದೆಯಾ ಎಂಬ ಪ್ರ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಪ್ರತಿವರ್ಷ ನವೆಂಬರ್ 3ರಿಂದ ಉತ್ಸವ ಆರಂಭವಾಗ್ತಿತ್ತು. ಆದ್ರೆ ಈ ಬಾರಿ ಬರದ ನೆಪವೊಡ್ಡಿ ಸರ್ಕಾರ ಉತ್ಸವ ಆಚರಿಸದಿರಲು ನಿರ್ಧರಿಸಿತ್ತು. ಆದ್ರೆ ಸಾಹಿತಿ, ಕಲಾವಿದರು ಮತ್ತು ವಿಪಕ್ಷಗಳ ಹೋರಾಟಕ್ಕೆ ಮಣಿದ ಸರ್ಕಾರ 3 ದಿನಗಳ ಬದಲಿಗೆ 2 ದಿನ ಅಂದ್ರೆ ಜನವರಿ 12, 13ರಂದು ಆಚರಿಸಲು ನಿರ್ಧರಿಸಿತ್ತು. ಅಲ್ಲದೆ ಸಚಿವೆ ಜಯಮಾಲ 60 ಲಕ್ಷ ಅನುದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಅಂತ ಹೇಳಿದ್ದರು.
ಐತಿಹಾಸಿಕ ಹಂಪಿ ಉತ್ಸವ ಸಿದ್ಧತೆಗೆ ಕನಿಷ್ಠ ಒಂದು ತಿಂಗಳಾದ್ರೂ ಸಮಯಬೇಕು. ಜಿಲ್ಲಾಧಿಕಾರಿಗಳಗೆ ಈ ಕುರಿತು ಕೇಳಿದರೆ, ನಾವು ಸರ್ಕಾರಕ್ಕೆ ಹಂಪಿ ಉತ್ಸವದ ವಿಚಾರವಾಗಿ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ. ಇನ್ನೊಂದು ವಾರದಲ್ಲಿ ನಮಗೆ ಹಂಪಿ ಉತ್ಸವದ ಕುರಿತು ಮಾಹಿತಿ ದೊರಕುತ್ತದೆ ಎಂದು ಹೇಳಿದ್ದಾರೆ. ಆದ್ರೆ ಸರ್ಕಾರ ಈವರೆಗೆ ಯಾವುದೇ ಸಭೆ ನಡೆಸಿಲ್ಲ. ಜಿಲ್ಲಾಡಳಿತಕ್ಕೂ ಯಾವುದೇ ಸೂಚನೆ ಕೊಟ್ಟಿಲ್ಲ. ಹೀಗಾಗಿ ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಉತ್ಸವ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv