-ಕಬಡ್ಡಿ ಆಡಿದ ಡಿಸಿ, ಸಿಇಓ
ಬಳ್ಳಾರಿ: ಎರಡು ದಿನಗಳ ಕಾಲ ನಡೆಯುವ ವಿಶ್ವ ವಿಖ್ಯಾತ ಹಂಪಿ ಉತ್ಸವ ಇಂದಿನಿಂದ ಆರಂಭವಾಗಿದ್ದು, ಉತ್ಸವದ ಮೊದಲ ದಿನವಾದ ಇಂದು ಮೈನವಿರೇಳಿಸುವ ಸಾಹಸ ಕ್ರೀಡೆಗಳು, ಜಲ ಕ್ರೀಡೆ ಹಾಗೂ ಗ್ರಾಮೀಣ ಕ್ರೀಡೆಗಳು ಜನರ ಗಮನ ಸೆಳೆದಿದೆ.
ಹಲವು ಗೊಂದಲಗಳ ನಡುವೆ ಕೊನೆಗೂ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಅಧಿಕೃತವಾಗಿ ಇಂದು ಸಂಜೆ ಉದ್ಘಾಟನೆಯಾಗಲಿದೆ ವಿಜೃಂಭಣೆಯಿಂದ ಉತ್ಸವ ನಡೆಯಲಿದ್ದು, ಇಂದು ಬೆಳಗ್ಗಿನಿಂದಲೇ ಹಂಪಿ ಉತ್ಸವ ಆರಂಭವಾಗಿದೆ. ಕಬಡ್ಡಿ ಆಟ ಆಡುವ ಮೂಲಕ ಜಿಲ್ಲಾಧಿಕಾರಿ ಹಾಗೂ ಸಿಇಓ ಚಾಲನೆ ನೀಡಿದರು.
Advertisement
Advertisement
ಉತ್ಸವದಲ್ಲಿ ಈ ಭಾರಿ ಸಾಹಸ ಕ್ರೀಡೆಗಳು, ಜಲ ಕ್ರೀಡೆಗಳನ್ನು ಸಹ ಆಯೋಜಿಸಲಾಗಿದೆ. ಜಲ ಕ್ರೀಡೆಗಳಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. ರಾಕ್ ಕ್ಲೇಮಿಂಗ್, ಗುಡ್ಡ ಹತ್ತುವ ಸ್ಪರ್ಧೆಗಳನ್ನ ಹಾಗೂ ಇತರೆ ಕ್ರೀಡಾಕೂಟಗಳನ್ನ ನೋಡಿ ಜನರು ಸಂಭ್ರಮಿಸಿದ್ದಾರೆ.
Advertisement
Advertisement
ಉತ್ಸವದಲ್ಲಿ ಈ ಭಾರಿ ಫಲಪುಪ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಗೆಯೇ ಮರಳಿನಲ್ಲಿ ನಿರ್ಮಾಣವಾಗಿರುವ ಹಂಪಿ ಶಿಲ್ಪಕಲಾಕೃತಿಗಳು ಎಲ್ಲರ ಗಮನ ಸೆಳೆದಿದೆ. ಇಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಅಧಿಕೃತವಾಗಿ ಉತ್ಸವ ಉದ್ಘಾಟನೆ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ನಟ ದರ್ಶನ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ಜನರನ್ನ ರಂಜಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv