– ವೀರೇಶ್ ದಾನಿ
ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಗೆ ಮೊನ್ನೆ ಮೊನ್ನೆಯಷ್ಠೆ ಅಮೇರಿಕದ ನೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ 2ನೇ ಸ್ಥಾನ ದೊರೆತಿದೆ. ಆದರೆ ಇಂತಹ ಐತಿಹಾಸಿಕ ತಾಣವಾಗಿರುವ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿ ಇದೀಗ ಹಾಳು ಕೊಂಪೆಯಾಗಿತ್ತಿದೆ.
Advertisement
ಉತ್ತರ ಭಾರತ ಮೂಲದ ಮೂವರು ಕಿಡಿಗೇಡಿಗಳು ಹಂಪಿ ಸ್ಮಾರಕಕ್ಕೆ ದಕ್ಕೆ ಮಾಡಿದ್ದಲ್ಲದೇ ಸ್ಮಾರಕಗಳ ಸಾಲು ಕಂಬಗಳನ್ನು ಕೆಡವುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಹಂಪಿ ಪ್ರವಾಸಕ್ಕೆ ಬಂದಿದ್ದ ಉತ್ತರ ಭಾರತ ಮೂಲದ ಮೂವರು ಯುವಕರು ಹಂಪಿಯ ವಿಷ್ಣು ದೇವಾಲಯದ ಹಿಂದಿರುವ ಗಜ ಶಾಲೆಯ ಆನೆ ಸಾಲು, ಒಂಟೆ ಸಾಲುಗಳ ಬಳಿಯ ಸಾಲು ಕಂಬಗಳನ್ನ ಕೆಡವಿ ಸ್ಮಾರಕಗಳಿಗೆ ದಕ್ಕೆ ಮಾಡಿದ್ದಾರೆ.
Advertisement
Advertisement
ಕಿಡಿಗೇಡಿ ಯುವಕರು ಸಾಲುಕಂಬಗಳ ಸ್ಮಾರಕಗಳನ್ನ ಹಾಳು ಮಾಡಿರುವ ವಿಡಿಯೋವನ್ನ ಬೆಂಗಳೂರಿನಲ್ಲಿ ವಾಸವಾಗಿರುವ ಮಧ್ಯಪ್ರದೇಶ ಮೂಲದ ಆಯುಷ್ಯ ಸಾಹು ಎಂಬವರು ತಮ್ಮ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ,
Advertisement
ಆಯುಷ್ಯ ಸಾಹು ಸಾಮಾಜಿಕ ಜಾಲತಾಣಗಳಲ್ಲಿ ಸ್ಮಾರಕಗಳನ್ನ ಹಾನಿ ಮಾಡುತ್ತಿರುವ ವಿಡಿಯೋ ಪ್ರಸಾರ ಮಾಡಿದ ನಂತರವೂ ಸಹ ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಲ್ಲದೇ ಈ ಬಗ್ಗೆ ಇದೂವರೆಗೂ ಯಾವುದೇ ದೂರು ಸಹ ದಾಖಲು ಮಾಡದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv