ಟೆಲ್ ಅವಿವ್: ಇಸ್ರೇಲ್‌ನ (Israel) ರಕ್ಷಣಾ ಸಚಿವ ಯೋವ್ ಗ್ಯಾಲಟ್ ಸೋಮವಾರ ಗಾಜಾದ (Gaza) ಮೇಲೆ ಸಂಪೂರ್ಣ ಮುತ್ತಿಗೆಯ ಆದೇಶ ಹೊರಡಿಸಿದೆ. ಇದಾದ ನಂತರ ಪ್ಯಾಲೆಸ್ಟೀನ್ ಹಮಾಸ್ (Hamas) ಗುಂಪು ಒತ್ತೆಯಾಳಾಗಿ (Hostage) ಇಟ್ಟಿರುವ ನೂರಾರು ಇಸ್ರೇಲಿ ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ.
ಇಸ್ರೇಲ್ ಗಾಜಾವನ್ನು ಸಂಪೂರ್ಣ ಸೀಜ್ ಮಾಡಿದ್ದು, ವಿದ್ಯುತ್, ಆಹಾರ, ನೀರು, ಗೃಹ ಅಥವಾ ವಾಣಿಜ್ಯ ಬಳಕೆ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಎಚ್ಚರಿಕೆ ನೀಡಿದ ಹಮಾಸ್ ಸಶಸ್ತ್ರ ವಿಭಾಗ, ಯಾವುದೇ ಸೂಚನೆ ನೀಡದೆ ನಮ್ಮ ಜನರನ್ನು ಗುರಿಪಡಿಸಿದ್ದಲ್ಲಿ, ನಾವು ಒತ್ತೆಯಾಳಾಗಿ ಇಟ್ಟಿರುವವರಲ್ಲಿ ಒಬ್ಬೊಬ್ಬರನ್ನೇ ಕೊಲ್ಲಲಾಗುವುದು ಎಂದಿದೆ. ಈಗಾಗಲೇ ಇಸ್ರೇಲ್‌ನ ವೈಮಾನಿಕ ದಾಳಿಯಿಂದಾಗಿ ಒತ್ತೆಯಾಳಾಗಿದ್ದ ನಾಲ್ವರು ನಾಗರಿಕರು ಕೊಲ್ಲಲ್ಪಟ್ಟಿದ್ದಾಗಿ ಹಮಾಸ್ ಹೇಳಿಕೊಂಡಿದೆ. ಆದರೆ ಇದು ಖಚಿತವೇ ಎಂಬುದು ದೃಢವಾಗಿಲ್ಲ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅವರ ಸರ್ಕಾರ ಯುದ್ಧಕ್ಕೆ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ ಎಂದು ವರದಿಯಾಗಿದೆ. ನಾವು ಈ ಯುದ್ಧವನ್ನು ಬಯಸಿರಲಿಲ್ಲ. ಆದರೆ ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ದಾಳಿಮಾಡಿರುವುದು ಯುದ್ಧಕ್ಕೆ ಪ್ರಚೋದನೆ ನೀಡಿದೆ. ಆದರೆ ನಾವು ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಇಸ್ರೇಲ್ ಅದನ್ನು ಮುಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಶೋಪಿಯಾನದಲ್ಲಿ ಇಬ್ಬರು ಲಷ್ಕರ್ ಉಗ್ರರ ಎನ್‍ಕೌಂಟರ್
ಶನಿವಾರ ಪ್ರಾರಂಭವಾದ ಉದ್ವಿಗ್ನತೆಯಿಂದ ಇಲ್ಲಿಯವರೆಗೆ ಎರಡೂ ಕಡೆಗಳಿಂದ ಸುಮಾರು 1,600 ನಾಗರಿಕರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೆ, ಗಾಜಾದಲ್ಲಿ ಸಾವಿನ ಸಂಖ್ಯೆ 687ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಹಮಾಸ್ ಉಗ್ರರ ನಡೆಗೆ ಮೋದಿ ಖಂಡನೆ- ಇಸ್ರೇಲ್ ಪರ ನಿಂತ ಭಾರತ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]