ಟೆಲ್ ಅವೀವ್: ಹಮಾಸ್ನ (Hamas) ಗಾಜಾ ಮುಖ್ಯಸ್ಥ ಮೊಹಮ್ಮದ್ ಸಿನ್ವಾರ್ನನ್ನು (Muhammad Sinwar) ಇಸ್ರೇಲ್ ಸೇನೆ ಹತ್ಯೆ ಮಾಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಮೇ 14 ರಂದು ಇಸ್ರೇಲ್ ನಡೆಸಿದ ಬೃಹತ್ ವೈಮಾನಿಕ ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ತೀವ್ರವಾಗಿ ಗಾಯಗೊಂಡಿದ್ದ ಎಂಬ ವರದಿಗಳು ಬಂದಿದ್ದವು. ಆ ಸಮಯದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು, ದಾಳಿಯಲ್ಲಿ ಉಗ್ರಗಾಮಿ ಸಾವನ್ನಪ್ಪಿದ್ದಾನೆಯೇ ಎಂದು ಖಚಿತಪಡಿಸುವ ಸ್ಥಿತಿಯಲ್ಲಿರಲಿಲ್ಲ. ಮೊಹಮ್ಮದ್ ಸಿನ್ವಾರ್, ಮಾಜಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ನ ಸಹೋದರ. ಯಾಹ್ಯಾ 2024 ರ ಅಕ್ಟೋಬರ್ನಲ್ಲಿ ಇಸ್ರೇಲಿ ಮಿಲಿಟರಿಯೊಂದಿಗಿನ ಘರ್ಷಣೆಯಲ್ಲಿ ಹತ್ಯೆಗೀಡಾಗಿದ್ದ. ಇದನ್ನೂ ಓದಿ: ಇರಾನ್ನಲ್ಲಿ ಭಾರತದ ಮೂವರು ಯುವಕರ ಕಿಡ್ನ್ಯಾಪ್ – ಬಿಡುಗಡೆಗೆ 1 ಕೋಟಿ ಡಿಮ್ಯಾಂಡ್
ಮೇ 14 ರಂದು ಇಸ್ರೇಲ್ ರಕ್ಷಣಾ ಪಡೆಗಳು ನಿಖರವಾದ ಡ್ರೋನ್ ದಾಳಿ ಮಾಡಿದಾಗ, ಗಾಜಾದಲ್ಲಿ ಉಳಿದಿರುವ ಕೊನೆಯ ಉನ್ನತ ಕಮಾಂಡರ್ಗಳಲ್ಲಿ ಒಬ್ಬನಾಗಿದ್ದ ಮೊಹಮ್ಮದ್ ಸಿನ್ವಾರ್, ಉಗ್ರಗಾಮಿ ಗುಂಪು ಕಮಾಂಡ್ ಸೆಂಟರ್ ಆಗಿ ಬಳಸುತ್ತಿದ್ದ ಭೂಗತ ಸೌಲಭ್ಯದಲ್ಲಿದ್ದ.
ಖಾನ್ ಯೂನಿಸ್ನಲ್ಲಿರುವ ಯುರೋಪಿಯನ್ ಆಸ್ಪತ್ರೆಯ ಅಡಿಯಲ್ಲಿ ಕಮಾಂಡ್ ಸೆಂಟರ್ ಇತ್ತು. ನಿಖರವಾದ ದಾಳಿಯ ನಂತರದ ಘಟನೆಗಳ ವೀಡಿಯೊವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿತ್ತು. ಅದರಲ್ಲಿ ಆಸ್ಪತ್ರೆಯ ಕೆಳಗೆ ಒಂದು ಸುರಂಗವು ಹಮಾಸ್ ಸೌಲಭ್ಯಕ್ಕೆ ಕರೆದೊಯ್ಯುವುದನ್ನು ತೋರಿಸಿತ್ತು. ಇದನ್ನೂ ಓದಿ: ಭಾರತ ಜಲಯುದ್ಧ; ಇತ್ತ ಅಫ್ಘಾನಿಸ್ತಾನದಿಂದಲೂ ಶಾಕ್ ಆತಂಕ, ಪಾಕ್ನಲ್ಲಿ ಚೀನಾ ಅಣೆಕಟ್ಟೆ ನಿರ್ಮಾಣ ಯಾಕೆ?
ನಾವು ಮೊಹಮ್ಮದ್ ಸಿನ್ವಾರ್ನನ್ನು ಹತ್ಯೆ ಮಾಡಿದ್ದೇವೆ ಎಂದು ಪ್ರಧಾನಿ ನೆತನ್ಯಾಹು (Benjamin Netanyahu) ಇಸ್ರೇಲ್ ಸಂಸತ್ತಿನ ನೆಸ್ಸೆಟ್ನಲ್ಲಿ ಹೇಳಿದ್ದಾರೆ. ನಾವು (ಇಸ್ರೇಲ್) ಇಸ್ಮಾಯಿಲ್ ಹನಿಯೆ, ಮೊಹಮ್ಮದ್ ಡೀಫ್, ಯಾಹ್ಯಾ ಸಿನ್ವಾರ್ ಮತ್ತು ಈಗ ಮೊಹಮ್ಮದ್ ಸಿನ್ವಾರ್ನನ್ನು ಮುಗಿಸಿದ್ದೇವೆಂದಿದ್ದಾರೆ.