ತುಮಕೂರು: ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ (Parameshwar) ಶೀಘ್ರದಲ್ಲೇ ಮುಖ್ಯಮಂತ್ರಿ ಭಾಗ್ಯ ಒಲಿದು ಬರಲಿ ಎಂದು ಹಾಲುಮತದ ಗೊರವಯ್ಯ (Halumatha Goravayya) ಅವರು ಕಾರ್ಣಿಕ ಭವಿಷ್ಯ ನುಡಿದರು.
ಹಾಲುಮತ ಜನಾಂಗದ ಮೂವರು ಗೊರವಯ್ಯನವರು ಮಾ. 20ರಂದು ತುಮಕೂರಿನ (Tumakuru) ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಉಸ್ತುವಾರಿ ಸಚಿವರ ಕಚೇರಿಗೆ ಆಕಸ್ಮಿಕ ಭೇಟಿ ನೀಡಿದ ವೇಳೆ ಕಾರ್ಣಿಕ ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ಮೋಹನ್ ಲಾಲ್ ಪೂಜೆ- ಶುರುವಾಯ್ತು ಪರ ವಿರೋಧದ ಚರ್ಚೆ
- Advertisement -
- Advertisement -
ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಶೀಘ್ರದಲ್ಲಿ ಅಧಿಕಾರದಿಂದ ಇಳಿದು, ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಸಿಎಂ ಆಗಲಿ ಎಂದು ಆಶಿರ್ವದಿಸಿದ್ದರು. ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ನಾಗಣ್ಣ ಅವರಿಗೂ ಕಾರ್ಣಿಕ ಭವಿಷ್ಯ ನುಡಿದು ಆಶೀರ್ವಾದ ನೀಡಿದ್ದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ | ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ತೆಗೆದುಕೊಂಡ ಕ್ರಮ – ವಿಜಯೇಂದ್ರ
- Advertisement -
- Advertisement -
ಇದೀಗ ಗೊರವಯ್ಯ ಅವರ ಕಾರ್ಣಿಕ ಭವಿಷ್ಯವು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪವರ್ ಶೇರಿಂಗ್, ಹನಿಟ್ರ‍್ಯಾಪ್ ಗದ್ದಲದ ನಡುವೆ ಸಿಎಂ ಬದಲಾವಣೆ ಚರ್ಚೆಯು ಮುಂಚೂಣಿಗೆ ಬಂದಿದೆ. ಇದನ್ನೂ ಓದಿ: ಲಾಂಗ್ ವಿವಾದ: ರಜತ್, ವಿನಯ್ 3 ದಿನ ಪೊಲೀಸ್ ಕಸ್ಟಡಿಗೆ