ವಾಷಿಂಗ್ಟನ್: ತುಪಾಕಿ ನೆರಳಿನಿಂದ ಅಮೆರಿಕ ಹೊರಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಚಿಕಾಗೋದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪರೇಡ್ ಸಂದರ್ಭದಲ್ಲೇ ಓರ್ವ ಯುವಕ ಅತ್ಯಾಧುನಿಕ ರೈಫಲ್ ಬಳಸಿ ಮಾರಣಹೋಮ ಮಾಡಿದ್ದಾನೆ.
ಈ ಘಟನೆಯಲ್ಲಿ 6 ಮಂದಿ ಬಲಿಯಾಗಿ, 24 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 22 ವರ್ಷದ ರಾಬರ್ಟ್ ಕ್ರಿಮೋ ಈ ಕೃತ್ಯ ಎಸಗಿದ ಅನುಮಾನವಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisement
Mass Shooting Highland Park 6 Killed, 24 Injured – prelim
309th Mass Shooting in 2022
15th Mass Murder 2022
Snapshot of all Mass Murders with over 20 victims pic.twitter.com/U3ZuhpvUCV
— The Gun Violence Archive (@GunDeaths) July 4, 2022
Advertisement
ಪ್ರತಿವರ್ಷ ಅಮೆರಿಕಾದಲ್ಲಿ 40 ಸಾವಿರ ಮಂದಿ ತುಪಾಕಿಗೆ ಬಲಿ ಆಗ್ತಿದ್ದಾರೆ ಎಂದು ಹೇಳಲಾಗಿದೆ. ಪ್ರಸಕ್ತ 2022ರಲ್ಲಿ 6 ತಿಂಗಳಲ್ಲೇ 309 ಸಾಮೂಗಿಕ ಗುಂಡಿನ ದಾಳಿಗಳು ನಡೆದಿದ್ದು, ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆಯಷ್ಟೇ 3 ಪ್ರಕರಣಗಳು ವರದಿಯಾಗಿವೆ. ಆದರೆ ಚಿಕಾಗೋನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯು ಅಮೆರಿಕ ಜನತೆಯನ್ನೇ ಬೆಚ್ಚಿ ಬೀಳಿಸಿದೆ.
Advertisement
Advertisement
ಗನ್ ವಯಲೆನ್ಸ್ ಆರ್ಕೈವ್(ಜಿವಿಎ) ವರದಿ ಪ್ರಕಾರ, 2022ರ ಅವಧಿಯಲ್ಲಿ ಈವರೆಗೆ ಕನಿಷ್ಠ 309 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ. 2014ರಿಂದ ಜಿವಿಎ ವರದಿಯೂ ಗುಂಡಿನ ದಾಳಿಯನ್ನು ಅಂದಾಜಿಸಲು ಪ್ರಾರಂಭಿಸಿತು. ವರದಿ ಆರಂಭಿಸಿದಾಗಿನಿಂದಲೂ 2021ರಲ್ಲಿ ಅತಿಹೆಚ್ಚು 692 ಪ್ರಕರಣಗಳು ದಾಖಲಾಗಿದ್ದವು. ಆದರೆ 2022ರಲ್ಲಿ 6 ತಿಂಗಳಲ್ಲೇ 309 ಗುಂಡಿನ ದಾಳಿಗಳು ನಡೆದಿದ್ದು, ವರ್ಷಾಂತ್ಯದ ವೇಳೆಗೆ 2021ರ ವರದಿಯನ್ನು ಮೀರಿಸುವಂತಿದೆ ಎಂದು ಜಿವಿಎ ವರದಿ ಹೇಳಿದೆ.
10 ಸಾವಿರಕ್ಕೂ ಹೆಚ್ಚು ಬಲಿ: ಅಮೆರಿಕದಲ್ಲಿ ಪ್ರತಿ ವರ್ಷ 40 ಸಾವಿರ ಮಂದಿ ಗುಂಡಿನ ದಾಳಿಗೆ ಬಲಿಯಾಗುತ್ತಿದ್ದಾರೆ. ಆದರೆ ಈ ವರ್ಷದಲ್ಲಿ ಈಗಾಗಲೇ 309 ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, 10,072 ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಆತ್ಮಹತ್ಯೆಗಳು ಯಾವುದೂ ಇಲ್ಲ. ಕೆಲವರು ಉದ್ದೇಶಪೂರ್ವಕ ಗುಂಡಿನ ದಾಳಿಗೆ ಬಲಿಯಾದರೆ ಇನ್ನೂ ಕೆಲವರು ಆಕಸ್ಮಿಕ ದಾಳಿಗೆ ಬಲಿಯಾಗಿದ್ದಾರೆ ಎಂದು ಜಿವಿಎ ವರದಿ ಉಲ್ಲೇಖಿಸಿದೆ.