ಬೆಂಗಳೂರು: ಹಲಸೂರಿನ ಗೇಟ್ ಸಂಚಾರಿ ಎಎಸ್‌ಐ (ASI) ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆನಂದ್ ಕುಮಾರ್ ಮೃತ ಎಎಸ್‌ಐ. ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡಿ ಮನೆಗೆ ತೆರಳಿದ್ದ ಆನಂದ್ ಕುಮಾರ್ ಕಳೆದ ರಾತ್ರಿ ಮಲಗಿದ್ದವರು ಅಲ್ಲಿಯೇ ಸಾವನ್ನಪ್ಪಿದ್ದಾರೆ.
ನಾಗರಬಾವಿ ಬಳಿಯ ಮನೆಯಲ್ಲಿ ಆನಂದ್ ಕುಮಾರ್ ಮಲಗಿದ್ದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ್ದಾರೆ. ಬಳಿಕ ವೈದ್ಯರು ಆನಂದ್ ಕುಮಾರ್ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಅಂಗಳದಲ್ಲಿ ಸಿಎಂ ಚೆಂಡು – ಸಿದ್ದು ಅಥವಾ ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?