ಬೀದರ್: ಕಾನೂನು ಬಾಹಿರ ಚಟುವಟಿಕೆಗಳನ್ನು ಯಾರು ಕ್ಷಮಿಸಲು ಸಾಧ್ಯವಿಲ್ಲ, ತಪ್ಪು ಮಾಡಿದರೆ ದಿವ್ಯಾ ಹಾಗರಗಿ ಶಿಕ್ಷೆ ಅನುಭವಿಸುತ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯದಲ್ಲಾಗಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಕ್ಷಮಿಸುವ ಅವಕಾಶವಿಲ್ಲ. ಕೋಟ್9ಗಳು ನಿಯಮಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಆ ಕಾನೂನಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ದಿವ್ಯಾ ಹಾಗರಗಿ ಆಸ್ತಿ ಮುಟುಗೋಲು ಮಾಡಿಲ್ಲ, ಆದರೆ ಮುಂದೆ ಮಾಡುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಪಿಎಸ್‍ಐ ಅಕ್ರಮ ನೇಮಕಾತಿಯ ಪ್ರಮುಖ ಆರೋಪಿಯ ಆಸ್ತಿ ಮುಟುಗೋಲು ಹಾಕುವ ಸುಳಿವು ನೀಡಿದರು.
Advertisement
Advertisement
ದಿವ್ಯಾ ಹಾಗರಗಿ ಎಷ್ಟು ದಿನ ತಪ್ಪಿಸಿಕೊಳ್ಳೊಕೆ ಆಗುತ್ತದೆ, ಭೂಮಿ ಒಳಗಡೆ ಶಾಶ್ವತವಾಗಿ ಅಲ್ಲೆ ಇರೋಕೆ ಆಗುತ್ತಾ, ಇಂದಿನ ಅಡ್ವಾನ್ಸ್ ಯುಗದಲ್ಲಿ ಮೊಬೈಲ್ ಟ್ರಾಕ್ ಮಾಡಿ ಹಿಡಿತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್
Advertisement
Advertisement
ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ವಿಚಾರವಾಗಿ ಮಾತನಾಡಿ, ದಾಖಲೆ ಇವೆ ಎಂದು ಮಾಧ್ಯಮಗಳ ಮುಂದೆ ಖರ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈಗ ಮಾಹಿತಿ ನೀಡಿ ಅಂದರೆ ಈ ರೀತಿ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ
ರಾಜಕಾರಣಿಗಳು ಮಾತನಾಡುವಾಗ ಬಹಳ ಜವಾಬ್ದಾರಿಯಿಂದ ಮಾತಾಡಬೇಕು. ರಾಜಕೀಯ ಪ್ರೇರಿತವಾಗಿ ನಾನು ಏನು ಬೇಕಾದರೂ ಮಾತನಾಡುತ್ತೇನೆ ಎನ್ನುವುದು ಸರಿಯಲ್ಲ. ಹೀಗಾಗಿ ಪೊಲೀಸರು ಮಾಹಿತಿ ಪಡೆಯಲು ನೋಟಿಸ್ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.