ರಾಯಚೂರು: ನೂತನ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದು, ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಆದರೆ ನೂತನ ಉಸ್ತುವಾರಿ ಸಚಿವರ ಸಭೆಯಲ್ಲಿ ಒಂದಷ್ಟು ಅಧಿಕಾರಿಗಳು ತಮಗೇನು ಸಂಬಂಧವಿಲ್ಲವೆಂಬಂತೆ ನಿದ್ರೆಗೆ ಜಾರಿದ್ದು ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸಿತು. ಇನ್ನೂ ಕೆಲವರಂತೂ ಸಭೆ ಮುಗಿಯುವವರೆಗೂ ಮೊಬೈಲ್‍ನಲ್ಲೇ ಮುಳುಗಿದ್ದ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ.
Advertisement
ಕೋವಿಡ್, ಡೆಂಗ್ಯೂ, ವೈರಲ್ ಫೀವರ್ ಸೇರಿದಂತೆ ಜಿಲ್ಲೆಯಲ್ಲಿ ಮಕ್ಕಳನ್ನು ಕಾಡುತ್ತಿರುವ ಕಾಯಿಲೆಗಳ ಬಗ್ಗೆ ಸಚಿವರು ಚರ್ಚೆ ಮಾಡುತ್ತಿದ್ದರೆ, ಅಧಿಕಾರಿಗಳು ಮಾತ್ರ ಮೊಬೈಲ್‍ನಲ್ಲಿ ಮಗ್ನರಾಗಿದ್ದರು. ಎಲ್ಲಾ ಮರೆತು ಸಭೆಯಲ್ಲಿ ನಿದ್ರೆಗೆ ಜಾರಿದ್ದರು. ಕೊನೆಯ ಕುರ್ಚಿಗಳಲ್ಲಿ ಕುಳಿತ ಅಧಿಕಾರಿಗಳು ತಮಗೂ ಸಭೆಗೂ ಸಂಬಂಧವೇ ಇಲ್ಲದಂತೆ ತಮ್ಮದೇ ಲೋಕದಲ್ಲಿ ಮುಳುಗಿದ್ದರು. ಇದನ್ನೂ ಓದಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ
Advertisement
Advertisement
ಕೋವಿಡ್ ವ್ಯಾಕ್ಸಿನೇಷನ್‍ನಲ್ಲಿ ರಾಯಚೂರು ಜಿಲ್ಲೆ ಶೇ. 60ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದಕ್ಕೆ ಸಚಿವರು ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಲಸಿಕೆ ಪ್ರಮಾಣ ಹೆಚ್ಚಿಸುವಂತೆ ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಸದ್ಯ ಐದು ಜನ ಕೋವಿಡ್ ಬಾಧಿತರಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡದೇ ರಿಮ್ಸ್‍ನಲ್ಲಿಯೇ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಸಿಎಂ ಆಗೋ ಹುಮ್ಮಸ್ಸಲ್ಲಿ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತಾಡ್ತಿದ್ದಾರೆ: ಶಿವರಾಮ್ ಹೆಬ್ಬಾರ್
Advertisement