ಹುಬ್ಬಳಿ: ಹಿಂದೂಪರ ಸಂಘಟನೆಗಳು ಹಲಾಲ್ (Halal) ಮುಕ್ತ ದೀಪಾವಳಿಗೆ ಕರೆ ನೀಡಿರುವ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲಿ (Hubballi) ಬಾಯ್ಕಾಟ್ (Boycott) ಮೆಕ್ಡೊನಾಲ್ಡ್ (McDonald’s), ಕೆಎಫ್‌ಸಿ (KFC), ಪಿಜ್ಜಾ ಹಟ್ (Pizza Hut) ಅಭಿಯಾನ ಕೂಡಾ ಆರಂಭಗೊಂಡಿದೆ.
ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್ ಕಂಪನಿಗಳು ತಮ್ಮ ಉತ್ಪನ್ನಗಳು ಶೇ.100 ರಷ್ಟು ಹಲಾಲ್ ಅಂತ ಘೋಷಣೆ ಮಾಡಿದ್ದವು. ಇದರಿಂದಾಗಿ ಕೆಂಡಾಮಂಡಲವಾಗಿರುವ ಹಿಂದೂ ಜನಜಾಗೃತಿ ಸಮಿತಿ ಈ ಕಂಪನಿಯ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿವೆ. ಇದನ್ನೂ ಓದಿ: ಕಿತ್ತೂರು ಉತ್ಸವ ಆಮಂತ್ರಣ ಪತ್ರಿಕೆಯಲ್ಲಿ ರಾಯಣ್ಣನ ಭಾವಚಿತ್ರ ಮಾಯ- ಅಭಿಮಾನಿಗಳು ಗರಂ
ಈ ಬಗ್ಗೆ ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು, ಹಲಾಲ್ ಹಠಾವ್ ದೇಶ ಬಚಾವೋ ಎಂದು ಘೋಷಣೆ ಕೂಗಿದ್ದಾರೆ. ಹಲಾಲ್ ವಸ್ತುಗಳ ಬಹಿಷ್ಕಾರ ಹಾಕಿ ಎಂದು ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಫೋನ್‌ಕಾಲ್ ಮೂಲಕ ವಿಚಾರಣೆ ನಡೆಸಿದ ಸುಪ್ರೀಂ