ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿದ್ಯಮಾನಗಳಿಗೂ ನಟ, ಸಾಮಾಜಿಕ ಹೋರಾಟಗಾರ ಚೇತನ್ ಪ್ರತಿಕ್ರಿಯಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಒಂದೊಂದು ಸಲ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ಸಲ ಅವರು ‘ಹಲಾಲ್’ ಕಟ್ ಮತ್ತು ‘ಜಟ್ಕಾ’ ಕಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೊಲ್ಲುವ ಮಾದರಿಗಳ ಬಗ್ಗೆ ಹೋರಾಡುವ ಬದಲು, ಜೀವ ರಕ್ಷಣೆಯ ಕೆಲಸ ಮಾಡಬೇಕು ಅಲ್ಲವಾ? ಎಂದು ಪರೋಕ್ಷವಾಗಿ ಹಿಂದೂ ಸಂಘಟನೆಗಳ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ : ಕಂಗನಾ ರಣಾವತ್ ಶೋನಲ್ಲಿ ಕರ್ಮ ಕರ್ಮ : ಶರ್ಟ್ ಬಿಚ್ಚಿತೀನಿ ಅಂದ ಮಾದಕ ನಟಿ ಪೂನಂ
ಹಲಾಲ್ ಕಟ್ ನಿಷೇಧಿಸಬೇಕು ಎಂಬ ಹೋರಾಟ ಕರ್ನಾಟಕದಲ್ಲಿ ತೀವ್ರಗೊಂಡಿದೆ. ಹಲಾಲ್ ಆಹಾರಗಳನ್ನು ಹಿಂದೂಗಳು ಕೊಳ್ಳದಿರುವಂತೆ ಹಿಂದೂಪರ ಸಂಘಟನೆಗಳು ಬೀದಿಗೆ ಇಳಿದಿವೆ. ಈ ಸಂದರ್ಭದಲ್ಲಿ ನಟ ಚೇತನ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ತಮ್ಮ ಫೇಸ್ ಬುಕ್ ಖಾತೆಯಲ್ಲಿ “ಕರ್ನಾಟಕದಲ್ಲಿ ಹಿಂದುತ್ವ ಸಂಘಟನೆಗಳು ಹಲಾಲ್ ಕಟ್ ಮಾಂಸ ಮಾರಾಟಗಾರರನ್ನು ನಿಷೇಧಿಸಲು ಜಟ್ಕಾ ಕಟ್ ಮಾಂಸವನ್ನು ಒತ್ತಾಯಿಸಿ ದಂಗೆ ಎಬ್ಬಿಸುತ್ತಿದ್ದಾರೆ. ನಾವು ಕೊಲ್ಲುವ ಮಾರ್ಗಗಳ ಬಗ್ಗೆ ಹೋರಾಡುವ ಬದಲು, ಹೆಚ್ಚಿನ ಜೀವಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಅಲ್ಲವೆ? ಸದ್ಯದ ಪರಿಸ್ಥಿತಿಯಲ್ಲಿ ಬುದ್ಧನ ಅಹಿಂಸೆಯ ಅಗತ್ಯವಿದೆಯೇ ಹೊರತು, ಕೋಮು ದ್ವೆಷದ ಅಗತ್ಯವಿಲ್ಲ” ಎಂದು ಬರಹದ ಮೂಲಕ ತಿವಿದಿದ್ದಾರೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್
ನಟ ಚೇತನ್ ಮೊನ್ನೆಯಷ್ಟೇ ಹಿಜಬ್ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ನ್ಯಾಯಾಧೀಶರ ವಿರುದ್ಧ ಮಾನಹಾನಿ ಆಗುವಂತಹ ಬರಹವನ್ನು ಟ್ವಿಟ್ ಮಾಡಿದರು ಎನ್ನುವ ಕಾರಣಕ್ಕಾಗಿ ಜೈಲಿಗೂ ಹೋಗಿ ಬಂದರು. ಅಲ್ಲದೇ ಇವರನ್ನು ದೇಶ ಬಿಡಿಸುವಂತಹ ಕೆಲಸಗಳು ನಡೆಯುತ್ತವೆ ಎಂದಾಗ, ಅದೆಲ್ಲವೂ ಸುಳ್ಳು, ನನ್ನ ಹೋರಾಟ ನಿರಂತರ ಎನ್ನುವ ಮೂಲಕ ತಮ್ಮ ಮಾತಿಗೆ ಬದ್ಧರಾಗಿಯೇ ಉಳಿಯುತ್ತಿದ್ದಾರೆ.