ಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!

Public TV
1 Min Read
hair dryer Short Circuit techies hair burnt bengaluru

ಬೆಂಗಳೂರು: ಹೇರ್‌ ಡ್ರೈಯರ್‌ನಿಂದ (Hair Dryer) ಶಾರ್ಟ್ ಸರ್ಕ್ಯೂಟ್ (Short Circuit) ಉಂಟಾಗಿ ಪೀಠೋಪಕರಣಗಳು ಬೆಂಕಿಯಿಂದ (Fire) ಸುಟ್ಟುಹೋದ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಮಹಿಳೆಯರ ಪಿಜಿಯಲ್ಲಿ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಶಾಂಭವಿ ಅವರು ಸ್ನಾನ ಮಾಡಿ ಕೆಲಸಕ್ಕೆ ಹೋಗುವ ಆತುರದಲ್ಲಿ ಹೇರ್ ಡ್ರೈಯರ್‌ ಬಳಸಿ ಕೂದಲು ಒಣಗಿಸುತ್ತಿದ್ದರು. ಈ ವೇಳೆ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ಹೇರ್‌ ಡ್ರೈಯರ್‌ನಲ್ಲಿ ಬೆಂಕಿ ಕಾಣಿಸಿದೆ.  ಇದನ್ನೂ ಓದಿ: ಇಂದಿನಿಂದ ಮಾರುಕಟ್ಟೆಯಲ್ಲಿ KMF ಎಮ್ಮೆ ಹಾಲು ಲಭ್ಯ – 1 ಲೀಟರ್ ಬೆಲೆ ಎಷ್ಟು ಗೊತ್ತಾ?

 

ಕೂದಲು ಸುಡುತ್ತಿದ್ದಂತೆ ಹೇರ್ ಡ್ರೈಯರ್‌ ಅನ್ನು ಶಾಂಭವಿ ಅವರು ಬೆಡ್‌ ಮೇಲೆ ಎಸೆದಿದ್ದಾರೆ. ಬೆಂಕಿಯಿಂದಾಗಿ ಬೆಡ್‌ ಸುಟ್ಟುಹೋಗಿದೆ. ಈಗ ಟೆಕ್ಕಿಯ ನಿರ್ಲಕ್ಷ್ಯದಿಂದ ಪಿಜಿಯ ಪೀಠೋಪಕರಣಕ್ಕೆ ಹಾನಿಯಾಗಿದೆ ಎಂದು ಮಾಲೀಕ ದೂರು ನೀಡಿದ್ದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article