ಬಾಗಲಕೋಟೆ: ಹೇರ್ ಡ್ರೈಯರ್ ಬ್ಲಾಸ್ಟ್ (Hair Dryer Blast) ಆಗಿ ಮೃತ ಯೋಧನ ಪತ್ನಿಯ ಎರಡು ಕೈಗಳು ತುಂಡಾಗಿರುವ ಘಟನೆ ಜಿಲ್ಲೆಯ ಇಳಕಲ್ (Ilkal) ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಾಜಿ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು.ಇದನ್ನೂ ಓದಿ: ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್
ಶಶಿಕಲಾ ಎಂಬುವರ ಹೆಸರು, ನಂಬರ್ ಹೊಂದಿದ್ದ ಪಾರ್ಸಲ್ ಕೊರಿಯರ್‌ಯೊಂದು ಬಂದಿತ್ತು. ಶಶಿಕಲಾ ಅವರು ಕೂಡ ಮೃತ ಯೋಧನ ಪತ್ನಿಯಾಗಿದ್ದರು. ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಅವರು ಊರಲ್ಲಿ ಇರದ ಕಾರಣ ಬಸಮ್ಮನಿಗೆ ಕೊರಿಯರ್ ಅನ್ನು ಪಡೆದು ತೆಗೆದು ನೋಡಲು ತಿಳಿಸಿದ್ದರು. ತೆಗೆದು ನೋಡಿದಾಗ ಹೇರ್ ಡ್ರೈಯರ್ ಇತ್ತು. ಈ ವೇಳೆ ಪಕ್ಕದ ಮನೆಯವರು ಹೇರ್ ಡ್ರೈಯರ್ ಆನ್ ಮಾಡಲು ತಿಳಿಸಿದ್ದಾರೆ. ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಬ್ಲಾಸ್ಟ್ ಆಗಿ ಜೋರಾಗಿ ಸದ್ದಾಯಿತು.
ಬ್ಲಾಸ್ಟ್ ಆದ ಹಿನ್ನೆಲೆ ಎರಡೂ ಕೈಗಳು ತುಂಡಾಗಿದ್ದು, ಬೆರಳುಗಳು ಛಿದ್ರ ಛಿದ್ರವಾಗಿ ತುಂಡಾಗಿದೆ. ಮನೆಯಲ್ಲಿ ರಕ್ತ ಚಿಮ್ಮಿದ್ದು, ಬಸಮ್ಮನನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಶಿಕಲಾ ಅವರನ್ನು ವಿಚಾರಿಸಿದಾಗ ನಾನು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ. ಆದರೆ ನನ್ನ ಹೆಸರಲ್ಲಿ ಹೇರ್ ಡ್ರೈಯರ್ ಬಂದಿದೆ. ಆರ್ಡರ್ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂದು ಪೊಲೀಸರಿಂದ ತನಿಖೆ ನಡೆದಿದೆ. ಸದ್ಯ ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ಉತ್ಪಾದನೆಯಾಗಿದ್ದು, ಕೊರಿಯರ್ ಬಾಗಲಕೋಟೆಯಿಂದ ಬಂದಿದೆ ಎಂದು ತಿಳಿದು ಬಂದಿದೆ. ಸದ್ಯ ಇಳಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್