ಬೆಂಗಳೂರು: ನಗರದಲ್ಲಿ ಕಾರ್ಮೋಡ ಕವಿದು ಇಂದು ಆಲಿಕಲ್ಲು ಮಳೆಯಾಗಿದೆ. ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ.
Advertisement
ಮಧ್ಯಾಹ್ನವೇ ಇಡೀ ಬೆಂಗಳೂರು (Bengaluru Rain) ಕತ್ತಲಿನಿಂದ ಆವೃತವಾಗಿತ್ತು. ಆಲಿಕಲ್ಲು ಮಳೆ, ಗಾಳಿಗೆ ಸಿಲುಕಿ ಸವಾರರ ತೊಂದರೆ ಅನುಭವಿಸಿದರು. ರಸ್ತೆಗಳ ಮೇಲೆ ಮಂಡಿಯುದ್ದದವರೆಗೆ ನೀರು ನಿಂತು ಹರಿಯಿತು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?
Advertisement
Advertisement
ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಕಬ್ಬಿಣದ ಕಾಂಪೌಂಡ್ ನೆಲಕ್ಕುರುಳಿದೆ. ಕಟ್ಟಡ ನಿರ್ಮಾಣ ಜಾಗದಲ್ಲಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿತ್ತು. ಗಾಳಿ ಬೀಸಿದ ವೇಗಕ್ಕೆ ಕಬ್ಬಿಣ ತಗಡಗಳು ಬಿದ್ದಿವೆ. ಅದೇ ಜಾಗದಲ್ಲಿ ಕರೆಂಟ್ ಲೈನ್ ಮೇಲೆ ಬೃಹತ್ ಮರದ ಕೊಂಬೆ ಕೂಡ ಉರುಳಿ ಬಿದ್ದಿದೆ.
Advertisement
ಚಾಲುಕ್ಯ ಸರ್ಕಲ್‌ನಿಂದ ಹೆಬ್ಬಾಳ ಮಾರ್ಗದ ರಸ್ತೆ ಸಂಪೂರ್ಣ ಜಾಮ್ ಆಗಿದೆ. ಬಾಲಬೃಹಿ ಗೆಸ್ಟ್‌ಹೌಸ್ ಬಳಿ ರಸ್ತೆ ಕೆರೆಯಂತಾಗಿದೆ. ಬಸವನಗುಡಿಯ ಬುಲ್ ಟೆಂಪಲ್ ರೋಡ್‌ನಲ್ಲಿ ಮಳೆಗೆ ಮರ ಧರೆಗುರುಳಿದೆ. ಬೆಂಗಳೂರು ಹೈಸ್ಕೂಲ್ ಬಸ್ ಸ್ಟಾಂಪ್‌ನಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ವಾಹನ ಸಂಖ್ಯೆ ಕಡಿಮೆ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಇದನ್ನೂ ಓದಿ: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ
ಯಶವಂತಪುರ ಬಿಎಂಟಿಸಿ ಒಳಗೆ ಮಳೆ ನೀರು ನುಗ್ಗಿ ಹರಿಯುತ್ತಿದೆ. ಬಿಎಂಟಿಸಿ ಬಸ್‌ಸ್ಟ್ಯಾಂಡ್ ಮಳೆ ನೀರಿನಿಂದ ಆವೃತವಾಗಿದೆ. ಕೆ.ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕುಟುಂಬ ಮುಳುಗಿ ನೆರವಿಗೆ ಕೂಗಿಕೊಂಡ ಘಟನೆ ನಡೆಯಿತು. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.