ಲಾಹೋರ್: ಮುಂಬೈ ಉಗ್ರರ ದಾಳಿಯ ಪ್ರಮುಖ ರೂವಾರಿ ಹಫೀಸ್ ಸಯೀದ್ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್‍ರ ವಿರುದ್ಧ ಬರೋಬ್ಬರಿ 10 ಕೋಟಿ ರೂ. ಮಾನನಷ್ಟ ಕೇಸ್ ಹಾಕಿದ್ದಾನೆ.
ಪಾಕಿಸ್ತಾನ ನೆಲದಿಂದ ಭಯೋತ್ಪದನೆಯನ್ನು ನಿಮೂರ್ಲನೆ ಮಾಡಬೇಕೆಂದು ಒತ್ತಾಯಿಸುವ ಅಮೆರಿಕಕ್ಕೆ ಲಷ್ಕರ್-ಎ-ತೊಬ್ಬಾ ಮತ್ತು ಹಫೀಸ್ ಸಯೀದ್ 20-30 ವರ್ಷಗಳ ಹಿಂದೆ ಹೆಚ್ಚು ಪ್ರಿಯರಾಗಿದ್ದರು ಎಂದು ನ್ಯೂಯಾರ್ಕ್‍ನಲ್ಲಿ ನಡೆದ ಏಷ್ಯಾ ಸೊಸೈಟಿ ಫಾರ್ಮ್ ನ ಸಭೆಯಲ್ಲಿ ಆಸಿಫ್ ಹೇಳಿಕೆ ನೀಡಿದ್ದರು.
Advertisement
ಈ ಹೇಳಿಕೆಯಿಂದ ಕೋಪಗೊಂಡಿರುವ ಜಮಾತ್-ಉದ್-ದವಾ ಸಂಘಟನೆಯ ಸಂಸ್ಥಾಪಕ ಹಫೀಸ್ ತನ್ನ ವಕೀಲ ಎ.ಕೆ.ಡೋಗರ್ ಮೂಲಕ ಖ್ವಾಜಾ ಆಸಿಫ್ ವಿರುದ್ಧ ಮಾನನಷ್ಟ ಕೇಸ್ ಹಾಕಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
ಹಫೀಸ್ ಸಾಂಪ್ರದಾಯಿಕ ಮುಸ್ಲಿಂ ವ್ಯಕ್ತಿಯಾಗಿದ್ದು, ಅಮೆರಿಕ ಶ್ವೇತಭವನಕ್ಕೆ ಇದುವರೆಗೂ ಭೇಟಿ ನೀಡಿಲ್ಲ, ಯಾರೊಂದಿಗೂ ಚರ್ಚೆಯನ್ನು ನಡೆಸಿಲ್ಲ. ವಿದೇಶಾಂಗ ಸಚಿವರ ಹೇಳಿಕೆ ಅಘಾತವನ್ನು ಉಂಟು ಮಾಡಿದೆ. ಅಲ್ಲದೆ ಅಸೀಫ್ ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ. ವಿದೇಶಾಂಗ ಸಚಿವರ ಈ ಹೇಳಿಕೆಗಳಿಂದ ಮಾನನಷ್ಟ ಉಂಟಾಗಿದೆ. ಇಂತಹ ಹೇಳಿಕೆಗಳಿಗೆ ಕಾನೂನಿನಲ್ಲಿ ಶಿಕ್ಷೆಯನ್ನು ವಿಧಿಸಲು ಸಾಧ್ಯವಿದೆ. ಅದರಿಂದ ಈ ನೋಟಿಸ್ ಜಾರಿ ಮಾಡುತ್ತಿರುವುದಾಗಿ ಹಫೀಸ್ ಪರ ವಕೀಲರು ತಿಳಿಸಿದ್ದಾರೆ.
Advertisement
ಕೇವಲ ಪಾಕಿಸ್ತಾನದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಹಫೀಸ್ ಅಭಿಮಾನಿಗಳಿಗೆ ಈ ಹೇಳಿಕೆಯಿಂದ ನೋವಾಗಿದೆ. ಪಾಕ್ ಕಾನೂನಿನ ಪ್ರಕಾರ ಇದೊಂದು ಮಾನಹಾನಿ ಹೇಳಿಕೆಯಾಗಿದ್ದು, ಪಾಕಿಸ್ತಾನ ದಂಡ ಸಂಹಿತೆಯ ಪ್ರಕಾರ ಈ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದು ವಕೀಲರು ಹೇಳಿದ್ದಾರೆ.
Advertisement
ಪಾಕಿಸ್ತಾನವು ಅಮೆರಿಕ ನೀಡಿದ ಆರ್ಥಿಕ ನೆರವನ್ನು ತನ್ನ ನೆಲದಲ್ಲಿ ಭಯೋತ್ಪದನೆಗೆ ಬೆಂಬಲವನ್ನು ನೀಡಲು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪವನ್ನು ಮಾಡಿದ್ದರು.
ಪಾಕಿಸ್ತಾನದ ಲಾಹೋರ್‍ನಲ್ಲಿ ಹಫೀಸ್ ಗೆ ಗೃಹ ಬಂಧನ ವಿಧಿಸಲಾಗಿದೆ. ಅಮೆರಿಕ 2014ರಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಜಮಾತ್-ಉದ್-ದವಾ ಸ್ಥಾನ ಪಡೆದಿದೆ.