LatestLeading NewsMain PostNational

2.5 ವರ್ಷಗಳ ಹಿಂದೆಯೇ ಸೇನಾ ನಾಯಕನಿಗೆ ಬಿಜೆಪಿ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರೆ MVA ಹುಟ್ಟುತ್ತಿರಲಿಲ್ಲ: ಠಾಕ್ರೆ

Advertisements

ಮುಂಬೈ: ಎರಡೂವರೆ ವರ್ಷಗಳ ಹಿಂದೆಯೇ ಶಿವಸೇನಾ ನಾಯಕನಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದ್ದರೆ, ಮಹಾ ವಿಕಾಸ್‌ ಅಘಾಡಿ (ಎಂವಿಎ) ಸೃಷ್ಟಿಯಾಗುತ್ತಿರಲೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ 2019ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಬೇರ್ಪಟ್ಟವು. ಐದು ವರ್ಷಗಳ ಅವಧಿಯಲ್ಲಿ ಎರಡೂ ಪಕ್ಷಗಳಿಗೆ ತಲಾ ಎರಡೂವರೆ ವರ್ಷಗಳ ಮುಖ್ಯಮಂತ್ರಿ ಸ್ಥಾನ ನೀಡುವ ಒಪ್ಪಂದದ ಕುರಿತು ಶಿವಸೇನಾ ಪ್ರಸ್ತಾಪಿಸಿತ್ತು. ಆದರೆ ಬಿಜೆಪಿ ಅದನ್ನು ಒಪ್ಪಲಿಲ್ಲ. ಆಗ ಶಿವಸೇನಾ ಸರ್ಕಾರ ರಚಿಸಲು ಪ್ರತಿಸ್ಪರ್ಧಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದನ್ನೂ ಓದಿ: ನೂತನ ಸರ್ಕಾರಕ್ಕೆ ನಾವು ತೊಂದರೆ ಕೊಡುವುದಿಲ್ಲ: ಸಂಜಯ್‌ ರಾವತ್‌

ನಿನ್ನೆ ಏನಾಯಿತು? ನಾನು ಅಮಿತ್ ಶಾಗೆ ಈ ಹಿಂದೆಯೂ ಎರಡೂವರೆ ವರ್ಷ ಅವಧಿಗೆ (ಶಿವಸೇನಾ-ಬಿಜೆಪಿ ಮೈತ್ರಿಯ ಸಂದರ್ಭದಲ್ಲಿ) ಶಿವಸೇನಾ ನಾಯಕ ಸಿಎಂ ಆಗಬೇಕು ಎಂದು ಹೇಳಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾ ವಿಕಾಸ್ ಅಘಾಡಿ ಇರುತ್ತಿರಲಿಲ್ಲ ಎಂದು ಉದ್ಧವ್‌ ತಿಳಿಸಿದ್ದಾರೆ.

ಸರ್ಕಾರ ರಚನೆಯಾದ ರೀತಿ ಮತ್ತು ಶಿವಸೇನಾ ಕಾರ್ಯಕರ್ತ ಎಂದು ಕರೆಸಿಕೊಳ್ಳುವವರನ್ನು ಸಿಎಂ ಮಾಡಿದ್ದನ್ನು ನೋಡಿದೆವು. ಅಮಿತ್ ಶಾ ಅವರಿಗೂ ಹಿಂದೆ ಅದನ್ನೇ ಹೇಳಿದ್ದೆ. ಇದನ್ನು ಗೌರವಯುತವಾಗಿ ಮಾಡಬಹುದಿತ್ತು. ಆ ಸಮಯದಲ್ಲಿ ಶಿವಸೇನಾ ಅಧಿಕೃತವಾಗಿ ನಿಮ್ಮೊಂದಿಗಿತ್ತು. ಏಕನಾಥ್ ಶಿಂಧೆ ಶಿವಸೇನಾ ಸಿಎಂ ಅಲ್ಲ ಎಂದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಚೇಂಜ್ ಮಾಡಿದ ಶಿಂಧೆ – ಬಾಳ್ ಠಾಕ್ರೆ ಫೋಟೋ ಜೊತೆಗೆ ಕೊಟ್ಟ ಸಂದೇಶವೇನು?

Live Tv

Leave a Reply

Your email address will not be published.

Back to top button