ನವದೆಹಲಿ: ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (Congress Presidential Polls) ಹಿನ್ನೆಲೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮತದಾನ ಮಾಡಿದ್ದಾರೆ. ನವದೆಹಲಿ ಕೇಂದ್ರ ಕಚೇರಿಗೆ ಆಗಮಿಸಿದ ಅವರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿದರು.
Advertisement
ಮತದಾನಕ್ಕೂ ಮುನ್ನ ಮಾತನಾಡಿದ ಅವರು, ನಾನು ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಇದು. ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಸೋನಿಯಾಗಾಂಧಿ ಮತದಾನದ ವೇಳೆ ಪುತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸಾಥ್ ನೀಡಿದರು. ಜೊತೆಗೆ ತಮ್ಮ ಮತವನ್ನು ಚಲಾಯಿಸಿದರು. ಇದನ್ನೂ ಓದಿ: ಮಳಲಿಯಲ್ಲಿರುವುದು ಮಂದಿರವೋ? ಮಸೀದಿಯೋ – ಇಂದು ತೀರ್ಪು ಪ್ರಕಟ ಸಾಧ್ಯತೆ
Advertisement
Advertisement
ಸೋನಿಯಾಗಾಂಧಿ ಬಳಿಕ ಎಐಸಿಸಿ ಕಚೇರಿಗೆ ಆಗಮಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಮತದಾನ ಮಾಡಿದರು. ಇದಕ್ಕೂ ಮುನ್ನ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಎಐಸಿಸಿ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್ ಸೇರಿ ಹಲವು ನಾಯಕರು ಮತದಾನ ಮಾಡಿದರು. ಇದನ್ನೂ ಓದಿ: ಬಿಜೆಪಿ ಹವಾ ಕುಗ್ಗಿಸಲು ಕಾಂಗ್ರೆಸ್ ಯಾತ್ರೆ ಅಸ್ತ್ರ – ಮುಂದಿನ ಟಾರ್ಗೆಟ್ ಕರಾವಳಿ, ಮುಂಬೈ ಕರ್ನಾಟಕ
Advertisement
ದೆಹಲಿಯಲ್ಲಿ 280ಕ್ಕೂ ಅಧಿಕ ನಾಯಕರು ಮತ ಚಲಾಯಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಸುಮಾರು 75 ಮಂದಿ ಪ್ರಮುಖ ಗಣ್ಯರು ಎಐಸಿಸಿ ಕಚೇರಿಯಲ್ಲಿ ಮತ ಚಲಾಯಿಸುತ್ತಿದ್ದು, ಬಾಕಿ ನಾಯಕರು ದೆಹಲಿಯ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮತ ಚಲಾಯಿಸುತ್ತಿದ್ದಾರೆ.