ಮಂಗಳೂರು: ಎಲ್ಲವೂ ಡಿಜಿಟಲೈಸ್ ಆಗ್ತಾ ಇದ್ದ ಹಾಗೆನೇ ಇವುಗಳಲ್ಲಿ ಆಗುವ ವಂಚನೆ (Cheating) ಪ್ರಕರಣಗಳು ಕೂಡ ಹೆಚ್ಚುತ್ತಲೇ ಇವೆ. ಸೈಬರ್ ಅಪರಾಧಗಳನ್ನ ತಡೆಯೋಕೆ ಪೊಲೀಸರು ಚಾಪೆ ಕೆಳಗೆ ನುಸುಳಿದ್ರೆ ಸೈಬರ್ ಖದೀಮರು ರಂಗೋಲಿ ಕೆಳಗೆ ತೂರಿ ಯಾಮಾರಿಸ್ತಾ ಇದ್ದಾರೆ. ಇಲ್ಲಿವರೆಗೆ ಸ್ವಲ್ಪ ಪಾಪ್ಯುಲಾರಿಟಿ ಇರೋ ಮಂದಿಯ ಖಾತೆ ಹ್ಯಾಕ್ ಮಾಡಿ ದುಡ್ಡು ಪೀಕಿಸೋಕೆ ಟ್ರೈ ಮಾಡ್ತಾ ಇದ್ದ ಖದೀಮರು, ಈಗ ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ. ಹೌದು ದಕ್ಷಿಣ ಕನ್ನಡ (Dakshina Kannada) ಜಿಲ್ಲಾಧಿಕಾರಿಗಳ ಈ ರೀತಿಯ ಸಮಸ್ಯೆ ತಂದಿಟ್ಟಿದ್ದಾರೆ ಕಿಲಾಡಿಗಳು.
Advertisement
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ (Cyber Crime) ಮೂಲಕ ವಂಚಿಸೋದು ಹೆಚ್ಚಾಗ್ತಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಹೊರತಾಗಿಲ್ಲ. ಡಿಸಿ ಖಾತೆಗೆ ಕನ್ನ ಹಾಕಿದ ಖದೀಮರು ಡಿಸಿ ಹೆಸರು, ಫೋಟೋ ಬಳಸಿಕೊಂಡು ವಾಟ್ಸಪ್ (Whatsapp) ಮೂಲಕ ಹಣ ವರ್ಗಾಯಿಸುವಂತೆ ಡಿಸಿ ಕೆ.ವಿ ರಾಜೇಂದ್ರ (K V Rajendra) ಗೆಳೆಯರಿಗೆ ಮೆಸೇಜ್ ರವಾನಿಸಿದ್ದಾರೆ. ಇದನ್ನೂ ಓದಿ: ಕೇಂದ್ರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ ಸಿದ್ದರಾಮಯ್ಯ
Advertisement
Advertisement
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (DC) ಡಾ.ರಾಜೇಂದ್ರ ಕೆ.ವಿ. ವಾಟ್ಸಪ್ ಖಾತೆ ಹ್ಯಾಕ್ ಮಾಡಲಾಗಿದ್ದು. 85907 10748 ನಂಬರ್‍ನಿಂದ ಡಿಸಿ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದ ಹಲವರಿಗೆ ಮೆಸೇಜ್ (Message) ಮಾಡಿದ್ದಾರೆ. ಜನತೆಗೆ ನಂಬಿಕೆ ಬರಲಿ ಅಂತಾ ವಾಟ್ಸಪ್ ಡಿಪಿಗೆ ಜಿಲ್ಲಾಧಿಕಾರಿಯವರ ಫೋಟೋ ಹಾಕಿ ಹಣ ವರ್ಗಾಯಿಸುವಂತೆ ಮೆಸೇಜ್ ಕಳಿಸಿದ್ದಾರೆ. ಇದಕ್ಕೆ ಡಿಸಿಯವರ ಇಮೇಲ್ ಹ್ಯಾಕ್ ಮಾಡಿ ಕಾಂಟ್ಯಾಕ್ಟ್ ಲಿಸ್ಟ್ ಪಡೆದಿರುವ ಸಾಧ್ಯತೆಗಳಿವೆ.
Advertisement
ಈ ವಿಚಾರ ಬೆಳಕಿಗೆ ಬರುತ್ತಲೇ ಯಾರೂ ಹಣ ವರ್ಗಾಯಿಸದಂತೆ ಜನರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಮಂಗಳೂರಿ (Mangaluru) ನ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಇತ್ತ ಸೈಬರ್ ಕ್ರೈಂ ವಿಭಾಗ ಇನ್ನಷ್ಟು ಅಲರ್ಟ್ ಆಗಿ ಖದೀಮರ ಪತ್ತೆಗೆ ಬಲೆ ಬೀಸಬೇಕಿದೆ.