ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರ ಚರ್ಚೆಯಲ್ಲಿರುವಾಗಲೇ ಕುಖ್ಯಾತ ಹ್ಯಾಕರ್ ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಜೀವನಭೀಮಾನಗರ ಪೊಲೀಸರು ನಿನ್ನೆ ಮಧ್ಯಾಹ್ನ ಶ್ರೀಕಿ ಮತ್ತು ಸ್ನೇಹಿತ ವಿಷ್ಣು ಭಟ್‍ನನ್ನು ಬಂಧಿಸಿದ್ದಾರೆ.
ನಿನ್ನೆ ತಡರಾತ್ರಿವರೆಗೆ ಶ್ರೀಕಿ ವಿಚಾರಣೆ ನಡೆಸಿದ್ದು, ಆತನ 2 ಮೊಬೈಲನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಜೊತೆಗೆ ಶ್ರೀಕಿಯ ನಾಲ್ಕು ಲ್ಯಾಪ್ ಟ್ಯಾಪ್‍ಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಪ್ರಸ್ತುತ ಇವರ ವಿರುದ್ಧ ಐಪಿಸಿ ಸೆಕ್ಷನ್ 504, 348, 323 ಅಡಿ ಪ್ರಕರಣ ದಾಖಲಾಗಿದ್ದು, ಇಂದು ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಮೂರನೇ ಪೀಠ ಅಸ್ತಿತ್ವಕ್ಕೆ..?
Advertisement
ಪ್ರಾಥಮಿಕ ತನಿಖೆಯಲ್ಲಿ ವಿಷ್ಣು ಭಟ್ ಹಲ್ಲೆ ಮಾಡಿರೋದು ಸಾಬೀತು ಆಗಿದ್ದು, ಹಲ್ಲೆ ವೇಳೆ ಶ್ರೀಕಿ ವಿಷ್ಣು ಜೊತೆಗಿದ್ದ, ಆದ್ರೆ ಹಲ್ಲೆ ಮಾಡಿಲ್ಲ ಅನ್ನೋ ಮಾಹಿತಿ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಪ್ರಸ್ತುತ ವಿಷ್ಣು ಭಟ್ ಮತ್ತು ಶ್ರೀಕಿ ಮೆಡಿಕಲ್ ಚೆಕಪ್ ಮಾಡಿಸಿರೋ ಪೊಲೀಸರು ಮೆಡಿಕಲ್ ರಿಪೋರ್ಟ್ ಗಾಗಿ ಕಾಯುತ್ತಿದ್ದಾರೆ.
Advertisement
ಮೆಡಿಕಲ್ ನಲ್ಲಿ ಮಾದಕ ವಸ್ತು ಸೇವನೆ ಪಕ್ಕಾ ಆದ್ರೆ ಎನ್‍ಡಿಪಿಎಸ್ ಕೇಸ್ ದಾಖಲು ಮಾಡುವ ಸಿದ್ಧತೆಯಲ್ಲಿ ಪೊಲೀಸರು ಇದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ರಾಜಕೀಯ ವಲಯದಲ್ಲಿ ಹ್ಯಾಕರ್ ಶ್ರೀಕಿ ಹೆಸರು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.