– ನಿಮಗೆ ಟ್ಯೂಷನ್ ತೆಗೆದುಕೊಳ್ತೇವೆ ಅಂತ ಬಿಜೆಪಿ ತಿರುಗೇಟು
ನವದೆಹಲಿ: ಚುನಾವಣೆಗಳಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ (Elon Musk) ಅನುಮಾನ ವ್ಯಕ್ತಪಡಿಸಿದ್ದಾರೆ. ಹ್ಯಾಕರ್‌ಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇವಿಎಂಗಳನ್ನು ಹ್ಯಾಕ್ (Hacking) ಮಾಡಬಹುದು. ಹಾಗಾಗಿ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಮಸ್ಕ್ ಹೇಳಿದ್ದಾರೆ.
ಮಸ್ಕ್ ಹೇಳಿಕೆಗೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿರುಗೇಟು ನೀಡಿದ್ದಾರೆ. ಸುರಕ್ಷಿತವಾಗಿರುವ ಡಿಜಿಟಲ್ ಹಾರ್ಡ್ವೇರ್ ಅನ್ನು ಯಾರೂ ತಯಾರಿಸಲು ಆಗುವುದಿಲ್ಲ. ಇವಿಎಂಗೆ (EVM) ಇಂಟರ್‌ನೆಟ್, ಬ್ಲೂಟೂತ್, ವೈಫೈ ಸಂಪರ್ಕ ಕೂಡ ಇಲ್ಲ. ಹ್ಯಾಕ್ ಮಾಡಲು ಆಗುವುದಿಲ್ಲ. ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್ ತೆರೆಯೋಣ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗುಜರಾತ್ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ
ಮಸ್ಕ್ ಹೇಳಿಕೆಗೆ ದನಿಗೂಡಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), ಭಾರತದಲ್ಲಿನ ಇವಿಎಂಗಳು ಕಪ್ಪು ಪೆಟ್ಟಿಗೆಗಳಾಗಿವೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅನುಮತಿಯಿಲ್ಲ ಅಂತ ಮುಂಬೈನಲ್ಲಿ 48 ಮತಗಳ ಅಂತರದಿಂದ ಸೋತ ಕಾಂಗ್ರೆಸ್‌ನ ಅಭ್ಯರ್ಥಿ ಉದಾಹರಣೆ ನೀಡಿದ್ದಾರೆ.
ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಡಿಎಂಕೆ ಪಕ್ಷಗಳು ಕೂಡ ಮಸ್ಕ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿವೆ. ಇವಿಎಂಗಳನ್ನು ತಿದ್ದುವ, ತಿರುಚುವ, ರಿಗ್ಗಿಂಗ್ ಮಾಡುವ ಸಾಧ್ಯತೆ ಇದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!