ಬೆಂಗಳೂರು: ಕೊರೋನಾ (Corona) ಬಳಿಕ ಪ್ರಸ್ತುತ ದೇಶದಲ್ಲಿ ಫ್ಲೂ (Flu) ಭೀತಿ ಎದುರಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ದೇಶದಾದ್ಯಂತ ಹೆಚ್3ಎನ್2 (H3N2) ರೋಗವು ವ್ಯಾಪಕವಾಗಿ ಹಬ್ಬುತ್ತಿದ್ದು ಕಳೆದ ಒಂದು ವಾರದಿಂದ ಶೇ. 10-15 ರಷ್ಟು ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಇದರ ಚಿಕಿತ್ಸೆ ಹೇಗೆ? ಏನು ಮಾಡಬೇಕು ? ಏನು ಮಾಡಬಾರದು? ಇದರ ಮುನ್ನೆಚ್ಚರಿಕಾ ಕ್ರಮಗಳೇನು ಎಂಬುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
Advertisement
ಚಿಕಿತ್ಸೆ ಹೇಗೆ?
ಹೆಚ್3ಎನ್2 ಎಂಬುವುದು ಇನ್‌ಫ್ಲುಯೆಂಜಾ (Influenza) ಎ ವೈರಸ್‌ನ ಎರಡನೇ ಜೀನ್‌ಗಳಿಂದ ಸೃಷ್ಟಿಯಾದ ತಳಿಯಾಗಿದೆ. ಈ ಉಪತಳಿಯು ಮೊದಲಿಗೆ ಅಮೇರಿಕಾದಲ್ಲಿ 1968ರಲ್ಲಿ ವರದಿಯಾಗಿತ್ತು. ಪ್ರಸ್ತುತ ಭಾರತದಲ್ಲಿ ಹೆಚ್3ಎನ್2 ರೋಗ ಕಾಣಿಸಿಕೊಂಡಿದ್ದು ದೊಡ್ಡವರು ಮಾತ್ರವಲ್ಲದೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲೂ ಈ ರೋಗ ಪತ್ತೆಯಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ
Advertisement
Advertisement
ಮೂರು ತಿಂಗಳಿನಿಂದ ಜ್ವರ, ವಿಪರೀತ ಕೆಮ್ಮು, ವಾಕರಿಕೆ ಹಾಗೂ ಶೀತ ಹೆಚ್3ಎನ್2 ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗದ ಲಕ್ಷಣಗಳು ಕಂಡುಬಂದ ವ್ಯಕ್ತಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ನೀಡಬೇಕು. ಈ ರೋಗಕ್ಕೆ ಯಾವುದೇ ಆ್ಯಂಟಿ ಬಯೋಟಿಕ್‌ನ ಅಗತ್ಯವಿಲ್ಲ. ಇದನ್ನೂ ಓದಿ: ನೀವು ವೈನ್ ಕುಡಿಯುತ್ತೀರಾ? ವೈನ್ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ
Advertisement
ಏನು ಮಾಡಬಾರದು?
ಹೆಚ್3ಎನ್2 ರೋಗಕ್ಕೆ ತುತ್ತಾಗಿರುವ ವ್ಯಕ್ತಿಯಿಂದ ಯಾವುದೇ ಕಾರಣಕ್ಕೂ ಶೇಕ್ ಹ್ಯಾಂಡ್ ಮಾಡಿಸಿಕೊಳ್ಳಬಾರದು. ಇಂತಹ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದರಿಂದ ಇತರರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಲಾಗಿದೆ. ಈ ರೋಗದ ಲಕ್ಷಣಗಳಿರುವವರು ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್ (Antibiotic) ಮಾತ್ರೆಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಇಂತಹ ವ್ಯಕ್ತಿಗಳ ಜೊತೆ ಕುಳಿತು ಊಟ ಮಾಡಬಾರದು. ಇದನ್ನೂ ಓದಿ: ಚಳಿಗಾಲದಲ್ಲಿ ಕೀಲುನೋವಿನಿಂದ ಮುಕ್ತಿ ಪಡೆಯಲು ಈ ಆಹಾರ ಸೇವಿಸಿ
ಏನು ಮಾಡಬೇಕು?
ಹೆಚ್3ಎನ್2 ಸೋಂಕಿನ ತಡೆಗಟ್ಟುವಿಕೆಗಾಗಿ ಜನ ಸಮೂಹದಿಂದ ಕಿಕ್ಕಿರಿದ ಸ್ಥಳಗಳಿಗೆ ಅನಗತ್ಯವಾಗಿ ಹೋಗಬಾರದು. ಮಾಸ್ಕ್ ಕಡ್ಡಾಯ ಎಂಬ ನಿಯಮವನ್ನು ತಪ್ಪದೇ ಪಾಲಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಈ ಸೋಂಕಿಗೆ ತ್ತುತಾದವರು ಹೆಚ್ಚು ಹೆಚ್ಚು ದ್ರವ ಆಹಾರಗಳನ್ನು ಸೇವನೆ ಮಾಡಬೇಕು. ಪದೇ ಪದೇ ಕಣ್ಣುಗಳನ್ನು ಮುಟ್ಟುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕಣ್ಣುಗಳನ್ನು ಮುಟ್ಟಬಾರದು. ಆಗಾಗ ಕೈಗಳನ್ನು ಸೋಪು ನೀರಿನಿಂದ ತೊಳಿಯಬೇಕು. ಜ್ವರ ಮತ್ತು ಮೈಕೈ ನೋವುಗಳು ಕಾಣಿಸಿಕೊಂಡಲ್ಲಿ ಪ್ಯಾರಸಿಟಮಲ್ (Paracetamol) ಮಾತ್ರೆಗಳನ್ನು ತೆಗೆದುಕೊಳ್ಳುವುದು ಹೆಚ್ಚು ಸೂಕ್ತ. ಇದನ್ನೂ ಓದಿ: ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು