ಕರ್ನಾಟಕ ಫ್ರಾಡ್‌ಗಳ ಸಂತೆಯಾಗಲು ಸಿದ್ದರಾಮಯ್ಯ ಕಾರಣ – ಹೆಚ್‌. ವಿಶ್ವನಾಥ್‌ ಲೇವಡಿ

Public TV
2 Min Read
H VISHWANATH 1

– ಬೈರತಿ ಸುರೇಶ್‌ನನ್ನ ಒದ್ದು ಒಳಗೆ ಹಾಕಿ, ಮುಡಾ ಹಗರಣ ಬಯಲಾಗುತ್ತೆ
– ʻಸೈನಿಕʼ ಕುಲಕ್ಕೆ ಯೋಗೇಶ್ವರ್ ಅಪಮಾನ ಎಂದ ಎಂಎಲ್‌ಸಿ

ಮೈಸೂರು: ಮುಡಾ ಹಾಗೂ ವಾಲ್ಮೀಕಿ ಹಗರಣ (MUDA And Valmiki Scam) ಪ್ರಕರಣದಲ್ಲಿ ಕಾಂಗ್ರೆಸ್‌ ಮುಳುಗಿದೆ. ಇದರ ಜೊತೆಗೆ ಯೋಗೇಶ್ವರ್ ಎಂಬ ಮತ್ತೊಬ್ಬ ಫ್ರಾಡ್‌ ಕಾಂಗ್ರೆಸ್‌ಗೆ ಜೊತೆಯಾಗಿದ್ದಾನೆ. ಕರ್ನಾಟಕ ಫ್ರಾಡ್‌ಗಳ ಸಂತೆಯಾಗಿದೆ, ಇದಕ್ಕೆ ಕಾರಣರು ಸಿಎಂ ಸಿದ್ದರಾಮಯ್ಯ (Siddaramaiah) ವಿಧಾನ ಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ (H Vishwanath) ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಸೈನಿಕʼ ಕುಲಕ್ಕೆ ಯೋಗೇಶ್ವರ್ (CP Yogeshwara) ಅಪಮಾನ. ಅವನನ್ನ ಸೈನಿಕ ಅಂತ ಕರೆಯಬೇಡಿ. ಹುಣಸೂರು ಉಪ ಚುನಾವಣೆ ವೇಳೆ ಪಾರ್ಟಿ ಕೊಟ್ಟ ಹಣ ತೆಗೆದು ಕೊಂಡು ಓಡಿ ಹೋದ. ಕಾಂಗ್ರೆಸ್‌ಗೆ ಒಬ್ಬ ಫ್ರಾಡ್‌ ಯೋಗೇಶ್ವರ್‌ ಅನಿವಾರ್ಯ ಆಗಿಬಿಟ್ನಾ? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

Yogeshwar DK Shivakumar Siddaramaiah

ಮುಡಾ ಹಾಗೂ ವಾಲ್ಮೀಕಿ ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್‌ ಮುಳುಗಿದೆ. ಇದರ ಜೊತೆಗೆ ಯೋಗೇಶ್ವರ್ ಎಂಬ ಮತ್ತೊಬ್ಬ ಫ್ರಾಡ್‌ ಕಾಂಗ್ರೆಸ್‌ಗೆ ಜೊತೆಯಾಗಿದ್ದಾನೆ. ಕರ್ನಾಟಕ ಫ್ರಾಡ್‌ಗಳ ಸಂತೆಯಾಗಿದೆ, ಇದಕ್ಕೆ ಕಾರಣರು ಸಿಎಂ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ – ಸಿಪಿವೈ ಪಕ್ಷ ಸೇರುವ ಮುನ್ಸೂಚನೆ ಕೊಟ್ಟ ಸಿಎಂ

Byrathi Suresh 1

ಇದೇ ವೇಳೆ ʻನಾನು ಪ್ರಾಮಾಣಿಕ ಎಂಬ ಸಿದ್ದರಾಮಯ್ಯ ಭಾಷಣಕ್ಕೆ ತಿರುಗೇಟು ನೀಡಿದ ವಿಶ್ವನಾಥ್‌, ಈ ಉಪಚುನಾವಣೆಯಿಂದ ಸರಕಾರಕ್ಕೆ ಏನೂ ಆಗಲ್ಲ. ಅದಕ್ಕೆ ಯಾಕೆ ಇಷ್ಟು ತಲೆ ಕೆಡಿಸಿ ಕೊಂಡಿದ್ದಾರೆ? ಸಿದ್ದರಾಮಯ್ಯ ಕಾಂಗ್ರೆಸ್‌ ಅನ್ನು ಹಾಳು ಮಾಡಿಬಿಟ್ಟರು. ಸಿದ್ದರಾಮಯ್ಯನವರೇ ರಾಜ್ಯದ ಜನ ಮಂಗರಲ್ಲ. ನಿಮ್ಮ ಸುಳ್ಳು ಜನರಿಗೆ ಅರ್ಥವಾಗುತ್ತಿದೆ. ಸಿದ್ದರಾಮಯ್ಯ ಒಬ್ಬ ಭ್ರಷ್ಟ ಎಂಬುದು ಜನರಿಗೆ ಗೊತ್ತಾಗಿದೆ. ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಬರೋಬ್ಬರಿ 5,000 ಕೋಟಿ ಅವ್ಯವಹಾರ ಆಗಿದೆ – ಶಾಸಕ ಎ ಮಂಜು ಹೊಸ ಬಾಂಬ್‌

MUDA 1

ಸಿದ್ದರಾಮಯ್ಯ ಅವರೇ ನಿಮ್ಮ ಸೊಸೆ ಹೆಸರಿನಲ್ಲಿ ಪಬ್ ಇಲ್ವಾ? ಅದಕ್ಕೆ ಕೋಟ್ಯಂತರ ಬಾಡಿಗೆ ಬರೋದಿಲ್ವಾ? ಬೈರತಿ ಸುರೇಶ್‌ನನ್ನ ಒದ್ದು ಒಳಗೆ ಹಾಕಿ. ಮುಡಾದ ಎಲ್ಲಾ ಹಗರಣ ಬಯಲಾಗುತ್ತದೆ. ಒಳ್ಳೆ ಕೆಲಸಕ್ಕೆ ಕುರುಬರನ್ನು ಕರೆಯಿರಿ ಅಂತಿದ್ದರು. ಈಗ ಅದಕ್ಕೂ ಸಿದ್ದರಾಮಯ್ಯ, ಬೈರತಿ ಸುರೇಶ್ ಅಂತವರು ಮಸಿ ಬಳಿದು ಬಿಟ್ಟರು. ಸಿದ್ದರಾಮಯ್ಯಗೆ ಅಂಟಿರುವ ಕೊಳಕು ತೊಳೆದುಕೊಳ್ಳಲು ಆಗಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ, ಮುಡಾದಲ್ಲಿ 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದಿದ್ದೇ ಕಾಂಗ್ರೆಸ್‌ನವರು: ಅಶೋಕ್

ಸಿದ್ದರಾಮಯ್ಯ 16ನೇ ಲೂಯಿ ದೊರೆ ಇದ್ದಂಗೆ. ಲೂಯಿ ತನ್ನ ನಂತರ ಜಲಪ್ರಳಯ ಆಗಲಿ ಅಂದಿದ್ದ. ಅದೇ ರೀತಿ ಸಿದ್ದರಾಮಯ್ಯ ತನ್ನ ನಂತರ ಯಾರು ಇರಬಾರದು ಎಂಬ ಮನಃಸ್ಥಿತಿ ಹೊಂದಿದ್ದಾರೆ. ಒಕ್ಕಲಿಗರು, ಲಿಂಗಾಯತರು ಸಿದ್ದರಾಮಯ್ಯಗೆ ಮತ ಹಾಕಿಲ್ವಾ? ಯಾಕೆ ಈಗ ಹಿಂದುಳಿದ ಕಾರ್ಡ್ ಅನ್ನು ಸಿಎಂ ಪ್ಲೇ ಮಾಡುತ್ತಿದ್ದಾರೆ? ಹಿಂದುಳಿದವರ ಮೂಗಿಗೆ ಸಿದ್ದರಾಮಯ್ಯ ಬೆಣ್ಣೆ ಸವರಿದ್ದಾರೆ. ಪ್ರದೇಶ ಕುರುಬರ ಸಂಘ ಒಡೆದಿದ್ದು ಯಾರು? ನಾನು ಕಟ್ಟಿದ ಕುರುಬರ ಮಠ ಒಡೆದಿದ್ದು ಯಾರು? ಇದೇ ಸಿದ್ದರಾಮಯ್ಯ ತಾನೇ ಎಂದು ಆರೋಪ ಮಾಡಿದ್ದಾರೆ.

Share This Article