ಬೆಂಗಳೂರು: ಶಾಮನೂರು ಶಿವಶಂಕರಪ್ಪ (Shamanur Shivshankarappa) ಅವರಿಗೆ ಓದಲು ಬರುತ್ತಾ ಎಂದು ಮೊದಲು ಕೇಳಿ, ಸುಮ್ಮನೆ ನಾಟಕ ಮಾಡಿಕೊಂಡು, ಬೂಟಾಟಿಕೆ ಮಾಡಿಕೊಂಡಿದ್ದರೆ ಯಾರು ಒಪ್ಪುವುದಿಲ್ಲ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಮತಗಳ ಮೇಲೆ ಅವರು ಬಂದಿದ್ದಾರೆ? ಯಾರ ಮತಗಳ ಮೇಲೆ ಅಪ್ಪ ಮಕ್ಕಳು ಗೆದ್ದಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕೇಸ್ ಗೊತ್ತಿದ್ದರೂ ತಿರುಚ್ತಿದ್ದಾರಾ ಸಿಎಂ?
ಕಾಂತರಾಜ್ ಕಮಿಟಿ ವರದಿಯನ್ನ ಸರ್ಕಾರ ಸ್ವೀಕಾರ ಮಾಡಬೇಕು. ಅಂತಹ ಪ್ರಾಮಾಣಿಕ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಇದರ ಬಗ್ಗೆ ಗಮನಹರಿಸಿರಲಿಲ್ಲ. ನಮ್ಮ ಸಮಾಜಕ್ಕೆ ವಿರೋಧ ಎಂದು ಅವರುಗಳು ಹೀಗೆ ಮಾಡಿದ್ದರು ಎಂದಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್‍ನವರು ಸಾಮಾಜಿಕ ನ್ಯಾಯಕ್ಕೆ ಬೆಂಬಲ ನೀಡಿಲ್ಲ. ಹಾವನೂರು ವರದಿಯನ್ನು ವಿರೋಧ ಮಾಡಿದ್ದರು. ಅದನ್ನು ಹೌಸ್‍ನಲ್ಲಿ ಹರಿದು ಹಾಕಿದ್ದರು, ಅಲ್ಲದೇ ಕತ್ತೆ ಮೇಲೆ ಮೆರವಣಿಗೆಯನ್ನೂ ಮಾಡಿದ್ದರು. ಇಷ್ಟೆಲ್ಲ ಆದರೂ ದೇವರಾಜ ಅರಸು ಅವರು ಎದೆಗುಂದದೆ ಜಾರಿ ಮಾಡಿದ್ದರು. ಆದ್ದರಿಂದ ಕಾಂತರಾಜ್ ವರದಿಯನ್ನ ಸರ್ಕಾರ ಸ್ವೀಕಾರ ಮಾಡಬೇಕು. ಸ್ವೀಕಾರ ಮಾಡಿ ಸಾರ್ವಜನಿಕವಾಗಿ ಚರ್ಚೆಗೆ ಬಿಡಬೇಕು ಎಂದಿದ್ದಾರೆ. ಇದನ್ನೂ ಓದಿ: ಯತ್ನಾಳ್ ಮನೆಗೆ ಹೋಗೋರು ಯಾರು?: ಬಿಎಸ್‍ವೈ ಕಿಡಿ