ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್

Public TV
1 Min Read
H Vishwanath 1

ಮಡಿಕೇರಿ: ಜನರಿಗೆ ಕಿರುಕುಳ ನೀಡುವ ಬಜರಂಗದಳಕ್ಕೂ (Bajrang Dal) ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್  (H.Vishwanath) ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

H Vishwanath

ಮಡಿಕೇರಿಯಲ್ಲಿ (Madikeri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ. ಜನರಿಗೆ ಪಾರ್ಕಲ್ಲಿ ಒಟ್ಟಿಗೆ ಓಡಾಡಲು ಬಿಡುವುದಿಲ್ಲ. ಇವರು ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ಆಂಜನೇಯ ಯಾವತ್ತೂ ಕಿರುಕುಳ ಕೊಟ್ಟವನಲ್ಲ. ಆದರೆ ಬಜರಂಗದಳದವರು ಕಾನೂನು ಕೈಗೆ ತೆಗೆದುಕೊಂಡು ಎಷ್ಟೋ ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

ಬಿಜೆಪಿ ನಾಯಕರ ಹೆಣ್ಣು ಮಕ್ಕಳು ಬೇರೆ ಧರ್ಮದವರನ್ನು ಮದುವೆ ಆಗಿಲ್ಲವೇ? ಲವ್ ಮಾಡಿಲ್ಲವೇ? ಪ್ರತಿ ಮಾತಿಗೂ ಆಂಜನೇಯ ಎಂದು ಹೇಳುವುದು ಸರಿಯಲ್ಲ. ಭಜರಂಗದಳ ಒಂದು ಸಂಘಟನೆ ಮಾತ್ರ ಎಂದಿದ್ದಾರೆ.

ನಾನು ಹಿಂದೂ, ಆಂಜನೇಯನ ಭಕ್ತ, ನನ್ನ ರಾಮ ವಿರಾಟ್ ಅಲ್ಲ ಶಾಂತಿ ಸೌಹಾರ್ದತೆಯ ರಾಮ, ಗಾಂಧಿ ಹೇಳಿಕೊಟ್ಟ ರಾಮ ಎಂದಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

Share This Article