ಬೆಂಗಳೂರು: ಲೋಕಸಮರದಲ್ಲಿ ಸ್ಪಷ್ಟ ಬಹುಮತಗಳೊಂದಿದೆ ಗೆದ್ದು ಮತ್ತೆ ಪ್ರಧಾನಿ ಪಟ್ಟ ಏರುತ್ತಿರುವ ನರೇಂದ್ರ ಮೋದಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹಾಡಿ ಹೊಗಳಿ ಶುಭಾಶಯ ಕೋರಿದ್ದಾರೆ.
ಇಂದು ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಈ ಹಿನ್ನೆಲೆ ಎಚ್. ವಿಶ್ವನಾಥ್ ಅವರು ಟ್ವೀಟ್ ಮೂಲಕ ಮೋದಿ ಅವರಿಗೆ ಶುಭಕೋರಿದ್ದಾರೆ. ಭಾರತದ ಎಲ್ಲಾ ಜಾತಿ ಜನಾಂಗ ಧರ್ಮ ಭಾಷಿಕರಣ ಆಶಯಗಳಂತೆ ಒಂದಾಗಿ ಎಲ್ಲರ ಭವಿಷ್ಯದ ಬಲ ಭೀಮನಾಗಿ ಪ್ರಧಾನಿ ಮೋದಿಯವರು ಹೆಜ್ಜೆ ಹಾಕಲಿ ಎಂದು ಆಶಿಸುತ್ತೇನೆ. ಎರಡನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡುತ್ತಿರುವ ನಿಮಗೆ ಶುಭಾಶಯಗಳು ಎಂದು ಹೊಗಳಿ ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಭಾರತದ ಎಲ್ಲಾ ಜಾತಿ ಜನಾಂಗ ಧರ್ಮ ಭಾಷಿಕರಣ ಆಶಯಗಳಂತೆ ಒಂದಾಗಿ ಎಲ್ಲರ ಭವಿಷ್ಯದ ಬಲ ಭೀಮನಾಗಿ ಪ್ರಧಾನಿ ಮೋದಿಯವರು ಹೆಜ್ಜೆ ಹಾಕಲಿ ಎಂದು ಆಶಿಸುತ್ತೇನೆ.
Advertisement
ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯನ್ನ ಒಪ್ಪಿ ಅಪ್ಪಿ ಆಡಳಿತ ನಡಿಸುತ್ತಿರುವ 71 ವರ್ಷಗಳ ಕಾಲದಿಂದಲೂ ಸ್ವಂತಂತ್ರವನ್ನು ಸಂರಕ್ಷಿಸಿ ಮುನ್ನುಗುತ್ತಿರುವ ಭಾರತದ ಪ್ರಧಾನಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡುತ್ತಿರುವ ನಿಮಗೆ ಭಾರತದ ಸಮಸ್ತ ಜನಕೋಟಿಯ ಶುಭಾಶಯದ ಶುಭಕಾಮನೆಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
ಭಾರತದ ಎಲ್ಲಾ ಜಾತಿ ಜನಾಂಗ ಧರ್ಮ ಭಾಷಿಕರಣ ಆಶಯಗಳಂತೆ ಒಂದಾಗಿ ಎಲ್ಲರ ಭವಿಷ್ಯದ ಬಲ ಭೀಮನಾಗಿ ಪ್ರಧಾನಿ ಮೋದಿಯವರು ಹೆಜ್ಜೆ ಹಾಕಲಿ ಎಂದು ಆಶಿಸುತ್ತೇನೆ.
2/2
— Adagooru H Vishwanath (@AH_Vishwanath) May 30, 2019
ಇಂದು ರಾಷ್ಟ್ರಪತಿ ಭವನದಲ್ಲಿ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆಗಳಿದ್ದು, ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಪ್ಟ್ರಪತಿ ಹಾಗೂ ಪ್ರಧಾನಿ ತೀರ್ಮಾನದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯನ್ನ ಒಪ್ಪಿ ಅಪ್ಪಿ ಆಡಳಿತ ನಡಿಸುತ್ತಿರುವ 71 ವರ್ಷಗಳ ಕಾಲದಿಂದಲು ಸ್ವಂತಂತ್ರವನ್ನು ಸಂರಕ್ಷಿಸಿ ಮುನ್ನುಗುತ್ತಿರುವ ಭಾರತದ ಪ್ರಧಾನಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡುತ್ತಿರುವ ನಿಮಗೆ ಭಾರತದ ಸಮಸ್ತ ಜನಕೋಟಿಯ ಶುಭಾಶಯದ ಶುಭಕಾಮನೆಗಳು.
1/2
— Adagooru H Vishwanath (@AH_Vishwanath) May 30, 2019
ಪ್ರಮುಖವಾಗಿ ಕಾರ್ಯಕ್ರಮಕ್ಕೆ ಬಂಗಾಳ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ ಆಪರೇಷನ್ (ಬಿಮ್‍ಸ್ಟಿಕ್) ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ, ನೇಪಾಳ, ಭೂತಾನ್, ಥೈಲ್ಯಾಂಡ್ ರಾಷ್ಟ್ರಗಳ ಗಣ್ಯರು ಸೇರಿದಂತೆ ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.