ಮೈಸೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳನ್ನು ಬಂಧಿಸಿ. ಮುರುಘಾ ಶ್ರೀಗಳು ಪೀಠ ತ್ಯಾಗ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.
ಶ್ರೀಗಳ ಮೇಲಿನ ಪ್ರಕರಣ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೋಕ್ಸೋ ಕಾಯ್ದೆ ಮಾಡಿ ಮುರುಘಾ ಶ್ರೀಗಳ ಮೇಲೆ ಕೇಸ್ ಆಗಿರೋ ಕಾರಣ ಅವರನ್ನು ಬಂಧಿಸಬೇಕು. ಅವರು ಆರೋಪಿ ಅಲ್ಲ. ಅಪರಾಧಿ. ಮುರುಘಾ ಶ್ರೀಗಳು ತಮ್ಮ ಮೇಲಿನ ಕೇಸ್ ನಿಂದ ಮುಕ್ತವಾಗುವವರೆಗೂ ತಾತ್ಕಾಲಿಕವಾಗಿ ಪೀಠ ತ್ಯಾಗ ಮಾಡಲಿ. ಈ ಕೇಸ್ ನಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಚಿತ್ರದುರ್ಗದ ಎಸ್‍ಪಿಯನ್ನು ಮೊದಲು ಅಮಾನತು ಮಾಡಿ ಎಂದು ಆಗ್ರಹಿಸಿದರು.
Advertisement
Advertisement
ನೆಲದ ಕಾನೂನಿನ ಪ್ರಕಾರ ಬಲವಾದ ಕೇಸ್ ಶ್ರೀಗಳ ವಿರುದ್ಧ ದಾಖಲಾಗಿದೆ. ಇದರಲ್ಲಿ ಬೇರೆ ಯಾರೂ ತಲೆ ಹಾಕಬಾರದು. ಮಾಜಿ ಸಿಎಂ, ಗೃಹ ಸಚಿವರು ಯಾರು ಈ ಕೇಸ್ ಬಗ್ಗೆ ಏನೇನೋ ಹೇಳಬಾರದು. ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾದ ಕೂಡಲೇ ಆತ ಆರೋಪಿ ಆಗಲ್ಲ. ಅಪರಾಧಿ ಆಗುತ್ತಾನೆ. ಕೇಸ್ ದಾಖಲಾದ 24 ಗಂಟೆಯೊಳಗೆ ಅಪರಾಧಿ ಬಂಧನವಾಗಬೇಕಿತ್ತು. ಸಂಧಾನ – ಅನು ಸಂಧಾನದ ಪ್ರಶ್ನೆ ಇಲ್ಲಿ ಬರಲ್ಲ ಎಂದರು.
Advertisement
Advertisement
ಜಾತಿ, ಧರ್ಮ ಯಾವುದು ಇಲ್ಲಿ ಮಧ್ಯ ಪ್ರವೇಶಿಸಬಾರದು. ಸ್ವಾಮೀಜಿ ಎಲ್ಲೋ ಹೋಗ್ತಿದ್ದರೆ ಅವರನ್ನು ಪೊಲೀಸರು ಗೌರವದಿಂದ ವಾಪಾಸ್ ಕರೆದುಕೊಂಡು ಬಂದಿದ್ದು ಸರಿನಾ? ನಾವು ಸ್ವಾಮೀಜಿ ಗಳ ಪರ ಇದ್ದೇವೆ ಎಂದು ಅವರ ಅಭಿಮಾನಿಗಳು ಮಠದಲ್ಲಿ ಘೋಷಣೆ ಕೂಗುತ್ತಾರೆ? ಹಾಗಾದರೆ ತಪ್ಪು ಮಾಡಿದವರ ಪರ ನೀವು ಇದ್ದೀರಾ? ಎಸ್‍ಪಿ ಏನ್ಮಾಡ್ತಿದ್ದಾರೆ? ಎಸ್‍ಪಿಯನ್ನು ಮೊದಲು ಅಮಾನತು ಮಾಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್
ಆ ಬಾಲಕಿಯರಿಗೆ ನ್ಯಾಯ ಸಿಗಬೇಕು. ಇದು ಅಪ್ರಾಪ್ತ ಬಾಲಕಿಯರು ವಿಚಾರ ಇದು. ಅವರು ಅಮಾಯಕ ಬಾಲಕಿಯರು. ಕರ್ನಾಟಕದಲ್ಲಿ ಬಹಳ ದೊಡ್ಡ ಗುರು ಪರಂಪರೆ ಇದೆ. ತಾತ್ಕಾಲಿಕವಾಗಿ ಮುರುಘಾ ಶ್ರೀಗಳು ಪೀಠ ತ್ಯಜಿಸಬೇಕು. ನಿಮ್ಮ ಮೇಲೆ ಬಂದ ಅಪವಾದ ಸುಳ್ಳಾದ ಮೇಲೆ ಮತ್ತೆ ಪೀಠ ಅಲಂಕರಿಸಿ. ಪೀಠ ತ್ಯಜಿಸಿ ಮುರುಘಾ ಮಠದ ಪೀಠದ ಗೌರವ ಉಳಿಸಿ. ಸಿಎಂ ಯಾವ ಮುಲಾಜಿಗೆ ಒಳಗಾಗ ಬಾರದು. ಸರಕಾರ ಈ ವಿಚಾರದಲ್ಲಿ ಲೋಪ ಮಾಡಿದ್ರೆ ಕ್ಷಮಿಸಲ್ಲ ನಿಮ್ಮನ್ನು ಕ್ಷಮಿಸಲ್ಲ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಯಾಕೆ ಮಾತಾಡ್ತಿಲ್ಲ. ಈ ನಾಡಿನ ಮಕ್ಕಳ ಪ್ರಶ್ನೆ ಇದು. ಪ್ರಧಾನ ಮಂತ್ರಿಗಳಿಗೆ ನಾನು ಈ ಬಗ್ಗೆ ವಿಸ್ತೃತವಾಗಿ ಪತ್ರ ಬರೆಯುತ್ತಿದ್ದೇನೆ. ಪತ್ರ ಯಾರ ವಿರುದ್ಧವೂ ಅಲ್ಲ. ಬದಲಾಗಿ ನಡೆದಿರುವ ಎಲ್ಲಾ ವಿಚಾರಗಳನ್ನು ಪತ್ರದಲ್ಲಿ ವಿವರಿಸುತ್ತೇನೆ ಎಂದು ವಿಶ್ವನಾಥ್ ಎಚ್ಚರಿಕೆ ನೀಡಿದರು.