ಮೈಸೂರು: ಮೊರಾರ್ಜಿ ಅವರಿಗೆ ನಾಗಪುರದಲ್ಲಿ ಚಪ್ಪಲಿ ಎಸೆದಿದ್ದರು. ಇಂದಿರಾಗಾಂಧಿ ಅವರಿಗೆ ಕಲ್ಲೇಟು ಬಿದ್ದಿತ್ತು. ಜಯಲಲಿತಾ ಸಿಎಂ ಆಗಿ ಇಳಿದಾಗ ಸದನದಲ್ಲಿ ಅವಮಾನ ಮಾಡಲಾಗಿತ್ತು. ಸಿದ್ದರಾಮಯ್ಯ ಇದನ್ನು ಮನಸಿಗೆ ಹಚ್ಚಿಕೊಂಡು ಪ್ರತಿ ತೀರಿಸಿಕೊಳ್ಳುವುದು ಸರಿಯಲ್ಲ ಎಂದು ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
Advertisement
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಇದೆಲ್ಲಾ ಸಹಜ. ಆದರೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಎಲ್ಲರೂ ಖಂಡಿಸಿದ್ದಾರೆ. ಇದನ್ನು ಹಾದಿರಂಪ ಬೀದಿರಂಪ ಮಾಡಬೇಡಿ. ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ. ಇಷ್ಟಾದ ಮೇಲೂ ಮಡಿಕೇರಿ ಶಕ್ತಿ ಪ್ರದರ್ಶನ ಸರಿಯಲ್ಲ. ನಾಳೆ ಅನಾಹುತ ಸಂಭವಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್ ಸಿಂಹ ಕಿಡಿ
Advertisement
Advertisement
ಮೊರಾರ್ಜಿ ಅವರಿಗೆ ನಾಗಪುರದಲ್ಲಿ ಚಪ್ಪಲಿ ಎಸೆದಿದ್ದರು. ಇಂದಿರಾಗಾಂಧಿ ಅವರಿಗೆ ಕಲ್ಲೇಟು ಬಿದ್ದಿತ್ತು. ಹಾಸನ ಸಮಾವೇಶದಲ್ಲಿ ಹಾವು ಬಿಡಲಾಗಿತ್ತು. ಜಯಲಲಿತಾ ಸಿಎಂ ಆಗಿ ಇಳಿದಾಗ ಸದನದಲ್ಲಿ ಅವಮಾನ ಮಾಡಲಾಗಿತ್ತು. ಸಿದ್ದರಾಮಯ್ಯ ಇದನ್ನು ಮನಸಿಗೆ ಹಚ್ಚಿಕೊಂಡು ಪ್ರತಿ ತೀರಿಸಿಕೊಳ್ಳುವುದು ಸರಿಯಲ್ಲ. ರಾಜೀವ್ ಗಾಂಧಿ, ಇಂದಿರಾಗಾಂಧಿಯನ್ನು ಕೊಂದರು. ಸಾರ್ವಜನಿಕ ಜೀವನದಲ್ಲಿ ಇದು ಸಹಜ. ಆದರೆ ಇದು ಖಂಡನೀಯ ಯಾರು ಒಪ್ಪಲ್ಲ. ಸಿದ್ದರಾಮಯ್ಯ ಅವರಿಗೆ ದಯಾ ಮಾಡಿ ವಿನಂತಿ ಮಾಡುತ್ತೇನೆ. ಚುನಾವಣಾ ವರ್ಷವಿದೆ ಏನೇನೋ ಅನಾಹುತವಾಗಬಹುದು. ಇದನ್ನು ಸದನದಲ್ಲಿ ಖಂಡಿಸಿ. ಬಿ.ಎಸ್. ಯಡಿಯೂರಪ್ಪ, ಎಸ್.ಎಂ. ಕೃಷ್ಣ ಮಧ್ಯಸ್ಥಿಕೆ ವಹಿಸಿ ಸಿದ್ದರಾಮಯ್ಯ ಜೊತೆ ಮಾತನಾಡಲಿ. ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ಸಿದ್ದರಾಮಯ್ಯ ಹಿರಿಯರ ಮಾತನ್ನು ಕೇಳಬೇಕು. ನಾವು ಯಾರು ದೊಡ್ಡವರಲ್ಲ. ಸಿದ್ದರಾಮಯ್ಯ ಸಹಾ ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸ: ಯತೀಂದ್ರ ಸಿದ್ದರಾಮ್ಯಯ ಕಿಡಿ
Advertisement
ಕೊಡಗಿನ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಕೊಡಗಿನವರಿಗೆ ರಾಜಕೀಯ ಪ್ರಾಧಾನ್ಯತೆ ಸಿಕ್ಕಿಲ್ಲ. ಕಾಂಗ್ರೆಸ್‍ನವರು ಅದನ್ನು ಮಾಡಿಲ್ಲ. ಕೊಡಗಿನಲ್ಲಿ ಹಲವು ಸಮಸ್ಯೆಗಳಿವೆ. ಈ ನಡುವೆ ಯಾರು ಶಾಂತಿಯನ್ನು ಕದಡಬಾರದು. ಕೊಡಗಿಗೆ ರಾಜಕೀಯ ಪ್ರಾತಿನಿಧ್ಯ ಪ್ರತ್ಯೇಕ ಪಾರ್ಲಿಮೆಂಟ್ ವ್ಯವಸ್ಥೆ ಮಾಡಬೇಕು. ಮೊಟ್ಟೆ, ಕೋಳಿ ಮಾಂಸ ದೇವರು ಆಮೇಲೆ ಮಾತನಾಡೋಣ. ಸಿದ್ದರಾಮಯ್ಯ ಮೊಟ್ಟೆ ಬಿಟ್ಟು ಈ ಬಗ್ಗೆ ಚರ್ಚೆ ಮಾಡಲಿ. ಎರಡು ಪಕ್ಷದ ನಾಯಕರು ಜೆಡಿಎಸ್‍ನವರು ಕುಳಿತು ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.