ತುಮಕೂರು: ತುಮಕೂರು ಹಾಲು ಒಕ್ಕೂಟದ (TUMUL) ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದೆ. ಸಚಿವರಾದ ಪರಮೇಶ್ವರ್ ಮತ್ತು ರಾಜಣ್ಣ ತಮ್ಮ ಬೆಂಬಲಿಗರಾದ ಪಾವಗಡ ಶಾಸಕ ವೆಂಕಟೇಶ್‌ರನ್ನು (H Venkatesh) ತುಮುಲ್ ಅಧ್ಯಕ್ಷರನ್ನಾಗಿಸಿದ್ದಾರೆ. ಇದೇ ಮೊದಲ ಬಾರಿಗೆ ನಾಮನಿರ್ದೇಶಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.
Advertisement
ಈ ಬೆಳವಣಿಗೆಯಿಂದ ಪತ್ನಿಯನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದ ಗುಬ್ಬಿ ಶಾಸಕ ಶ್ರೀನಿವಾಸ್‌ರನ್ನು (Gubbi Srinivas) ಕೆರಳಿಸಿದೆ. ಸಚಿವ ರಾಜಣ್ಣ ಮತ್ತು ಪರಮೇಶ್ವರ್ ವಿರುದ್ಧ ಶ್ರೀನಿವಾಸ್ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಇಬ್ಬರು ಸೇರಿಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಸಚಿವರ ವರ್ತನೆ ಬಗ್ಗೆ ಸಿಎಂ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹುಟ್ಟಿನಿಂದ ಸಿಗುವ ಪೌರತ್ವ ರದ್ದು – ಅಮೆರಿಕದಲ್ಲಿ ಹೆಚ್ಚಾಯ್ತು ಭಾರತೀಯ ಗರ್ಭಿಣಿಯರ ಸಿಸೇರಿಯನ್ ಹೆರಿಗೆ ಬೇಡಿಕೆ
Advertisement
Advertisement
ಆದರೆ ಇದಕ್ಕೆಲ್ಲಾ ರಾಜಣ್ಣ ಡೋಂಟ್ ಕೇರ್ ಎಂದಿದ್ದಾರೆ. ಪ್ರಕರಣಕ್ಕೆ ದಲಿತ ಟ್ವಿಸ್ಟ್ ಕೊಟ್ಟಿದ್ದಾರೆ. ಪರಮೇಶ್ವರ್ ನಂಗೇನು ಗೊತ್ತಿಲ್ಲಪ್ಪ ಎಂದು ಜಾರಿಕೊಂಡಿದ್ದಾರೆ. ಗುಬ್ಬಿ ಶ್ರೀನಿವಾಸ್‌ಗೆ ಅನ್ಯಾಯ ಆಗಿದೆ ಪಾಪ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯವಾಡಲು ಡಿವೋರ್ಸ್ ಮೊರೆ; ಕೇಸ್ ಕೋರ್ಟ್‌ನಲ್ಲಿರುವಾಗ್ಲೇ ಹೆಂಡ್ತಿ ಮನವೊಲಿಸಲು ಬಂದು ಸುಟ್ಟು ಕರಕಲು
Advertisement