ಬೆಂಗಳೂರು: ಜೆಡಿಎಸ್ ತೊರೆದಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಅವರು ಇಂದು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಕೊಪ್ಪಳ ಮುಖಂಡರು ಸಹ ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶ್ರೀನಾಥ್ ಸೇರಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸುವುದು ತಪ್ಪಲ್ಲ: ಜಿ. ಪರಮೇಶ್ವರ್
Advertisement
Advertisement
ಈ ವೇಳೆ ಮಾತನಾಡಿದ ಶ್ರೀನಾಥ್, ಕಳೆದ ಕೆಲವು ವರ್ಷಗಳಿಂದ ನಾನು ವನವಾಸದಲ್ಲಿ ಇದ್ದೆ. ನಮ್ಮ ರಕ್ತದಲ್ಲಿ ಕಾಂಗ್ರೆಸ್ ಇದೆ. ಇಂದಿರಾ ಗಾಂಧಿಯವರು ನಮ್ಮ ತಂದೆಯವರ ಮೇಲೆ ಮಗನಿಗಿಂತ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದರು ಎಂದು ನೆನಪಿಸಿಕೊಂಡರು.
Advertisement
Advertisement
ಬಿಜೆಪಿಯಿಂದಲೂ ನಮಗೆ ಪಕ್ಷ ಸೇರುವಂತೆ ಆಹ್ವಾನ ಇತ್ತು. ಆದರೆ ನಾವು ಎಲ್ಲಾ ಸಮಾಜದಲ್ಲಿ ವಿಶ್ವಾಸ ಹೊಂದಿರುವುದರಿಂದ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವುದರಿಂದ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ನಾಯಕತ್ವ ಘೋಷಣೆ ವದಂತಿ – ಅಖಾಡಕ್ಕೆ ಇಳಿದ ಡಿಕೆಶಿ