ಬೆಂಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಪಬ್ಲಿಕ್ ಟಿವಿ (PUBLiC TV) ಮುಖ್ಯಸ್ಥ ಹೆಚ್.ಆರ್. ರಂಗನಾಥ್ (HR Ranganath) ಅವರಿಗೆ ಆಹ್ವಾನ ಕೊಡಲಾಗಿದೆ.
ಆರ್‌ಎಸ್‌ಎಸ್ (RSS) ಪ್ರಾಂತ ಸಂಪರ್ಕ ಪ್ರಮುಖ್ ದೇವಾನಂದ್, ಆರ್‌ಎಸ್‌ಎಸ್ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಅವರು ಇಂದು ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿ ಆಹ್ವಾನಿಸಿದರು.
Advertisement
Advertisement
ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ದೇಶಾದ್ಯಂತ ಇರುವ 6 ಸಾವಿರ ಗಣ್ಯರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಮಂತ್ರಣ ನೀಡುತ್ತಿದೆ. ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಅಯೋಧ್ಯೆ ರಾಮ ಮಂದಿರ
Advertisement
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆ ನಡೆಯಲಿದ್ದು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ನಡುವಿನ 84 ಸೆಕೆಂಡ್‌ಗಳ ಅವಧಿಯನ್ನು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. 84 ಸೆಕೆಂಡ್ ಅವಧಿಯ ಶುಭ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾ (Prana Pratishta) ಕಾರ್ಯ ಸಂಪನ್ನಗೊಳ್ಳಲಿದೆ.
Advertisement
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮನ ಮೂರ್ತಿ ಸ್ಥಾಪನೆಗೆ ದಿನಾಂಕಗಳನ್ನು ಸೂಚಿಸಿತ್ತು. ಇದಕ್ಕೆ ಉತ್ತರವಾಗಿ ದಿನಾಂಕಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ಜನವರಿ ತಿಂಗಳ 17 ರಿಂದ 25ನೇ ತಾರೀಕಿನ ನಡುವೆ 5 ದಿನಾಂಕಗಳು ಇದ್ದವು. ಕೊನೆಗೆ ಪಂಡಿತ್ ಗಣೇಶ್ವರ್ ಶಾಸ್ತ್ರಿ ಅವರು ಜನವರಿ 22ರ ದಿನಾಂಕ ಹಾಗೂ ಪುಣ್ಯ ಮುಹೂರ್ತವನ್ನು ಆಯ್ಕೆ ಮಾಡಿದರು. ಜನವರಿ 22ರ ಮುಹೂರ್ತ ದೇಶಕ್ಕೆ ಸಂಜೀವಿನಿ ಯೋಗ ತರುತ್ತದೆ ಎಂಬ ಕಾರಣಕ್ಕೆ ಆ ಸಮಯವನ್ನೇ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಗರ್ಭಗುಡಿಯಲ್ಲಿ ರಾಮ – ಮಂದಿರದ ಬೇರೆ ಗುಡಿಗಳಲ್ಲಿ ಯಾವ ದೇವರು ಇರುತ್ತಾರೆ?