ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ನಡೆಸಿಕೊಟ್ಟ ಹೌಡಿ ಮೋದಿ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿತ್ತು. ಇದರಿಂದ ಪ್ರೇರಿತರಾದ ಬೆಂಗಳೂರಿನ ಶಾಲಾ ಮಕ್ಕಳು “ಹೌಡಿ ಬೆಂಗಳೂರು”, “ಹೌಡಿ ಹೆಚ್‍ಎನ್‍ಹಳ್ಳಿ” ಎಂಬ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದರು.
ನಗರದ ಹೆಚ್‍ಎನ್ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳ ನೂರಕ್ಕೂ ಹೆಚ್ಚು ಚಿಕ್ಕ ಮಕ್ಕಳು ಹಾಗೂ ನಾಗರೀಕರು ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಮಕ್ಕಳು ಗುಂಡಿಗಳು ಬಿದ್ದ ರಸ್ತೆಯ ನೀರಿನಲ್ಲಿ ಕಾಗದದ ದೋಣಿಗಳ ಆಟವಾಡಿದರು.
Advertisement
Advertisement
ಪ್ರತಿ ದಿನ ಶಾಲೆಗೆ ಹೋಗಬೇಕಾದರೆ ಗುಂಡಿ, ಧೂಳು, ಮೋರಿಯ ದುರ್ನಾತದಿಂದ ನಾವೆಲ್ಲಾ ಬೇಸತ್ತಿದ್ದೇವೆ. ನಮ್ಮ ಸ್ಕೂಲ್ ವ್ಯಾನ್ ಒಂದು ಕಿ.ಮೀ ರಸ್ತೆ ದಾಟಲು ಮುಕ್ಕಾಲು ಗಂಟೆ ಬೇಕಾಗುತ್ತೆ. ಹೀಗಾಗಿ ಗ್ರ್ಯಾಂಡ್ ಫಾದರ್ ಮೋದಿಯವರು ನಮ್ಮ ರೋಡ್ ಸರಿಪಡಿಸಬೇಕೆಂದು ಕೇಳಿಕೊಂಡರು.
Advertisement
Advertisement
ಏನಿದು ಹೌಡಿ ಮೋದಿ ಕಾರ್ಯಕ್ರಮ?
ನೈಋತ್ಯ ಅಮೆರಿಕದಲ್ಲಿ `ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ `ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು `ಹೌಡಿ ಮೋದಿ’ ಹೆಸರನ್ನಿಟ್ಟಿದ್ದರು.
ಸೆಪ್ಟೆಂಬರ್ 22 ಭಾನುವಾರದಂದು ಹ್ಯೂಸ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, 50 ಸಾವಿರ ಭಾರತೀಯ ಅಮೆರಿಕನ್ನರ ದಾಖಲೆಯ ಜನಸಮೂಹವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.