ಕಲಬುರಗಿ: ಪೆಹಲ್ಗಾಮ್ ಘಟನೆಯ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪಾಕಿಸ್ತಾನದ (Pakistan) ಜೊತೆ ಯುದ್ಧ ಬೇಡ ಎಂದು ಹೇಳಿಯೇ ಇಲ್ಲ. ಏನಿದ್ದರೂ ಮೊದಲು ಭದ್ರತೆ ಖಚಿತಪಡಿಸಿಕೊಂಡು ನಂತರ ಯುದ್ಧ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ (H M Revanna) ಹೇಳಿದರು.
ಕಲಬುರಗಿಯಲ್ಲಿ (Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಯುದ್ಧ ಬೇಡ ಎಂದಿಲ್ಲ. ದೇಶದ ಅಖಂಡತೆ ಮತ್ತು ಸಾರ್ಮಭೌಮತ್ವಕ್ಕೆ ಧಕ್ಕೆ ಬಂದಲ್ಲಿ ಹಾಗೂ ಅನಿವಾರ್ಯತೆ ಎನಿಸಿದರೆ ಯುದ್ಧ ಮಾಡಿ ಎಂದಿದ್ದಾರೆ. ಮೇಲಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತದೆ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ ಸ್ಪಷ್ಪಪಡಿಸಿದ್ದಾರೆ ಎಂದರು. ಇದನ್ನೂ ಓದಿ: ಹಾಸನ | ತಾಲೂಕು ಕಚೇರಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಪತ್ನಿ, ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ
ಕೇಂದ್ರ ಸರ್ಕಾರ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೂ ತಮ್ಮ ಪಕ್ಷದ ಬೆಂಬಲ ಇರುತ್ತದೆ ಎಂದು ಹೇಳಿದ ಮೇಲೆ ಇನ್ನೇನಿದೆ. ಇಷ್ಟು ದಿನ ತೂಕಡಿಸುತ್ತಾ, ಈಗ ಅಲ್ಲಿ ಯುದ್ಧ ಇಲ್ಲಿ ಯುದ್ಧ ಅಂತಿದ್ದೀರಿ. ಹಿಂದೆ ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ 80 ಸಾವಿರ ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದ್ದರು. ನಾವು ಮಾಡಿರುವುದರನ್ನು ನೋಡಿದರೆ ಇವರು ಏನೇನೂ ಅಲುಗಾಡಿಸುವುದಕ್ಕೆ ಆಗುವುದಿಲ್ಲ. ಬಿಜೆಪಿಯವರು ಬರೀ ಚಾಡಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ. ಸುಳ್ಳು ಅವರ ಮನೆಯ ದೇವರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಕೀಲರ ನೇಮಿಸಿಕೊಳ್ಳದ ಪ್ರಜ್ವಲ್‌ಗೆ ಉಚಿತ ಕಾನೂನು ಸೇವೆ – ಕೋರ್ಟ್‌ನಿಂದಲೇ ವಕೀಲರ ನೇಮಕ
ಬಿಜೆಪಿ (BJP) ಮತ್ತು ಜೆಡಿಎಸ್ (JDS) ನಾಯಕರು ಕೇವಲ ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಆದರೆ ನಾವು ಜನರ ಬದುಕಿನ ಜೊತೆಗೆ ಇರುತ್ತೇವೆ. ಜನರಿಗೆ ಅನುಕೂಲ ಆಗಲಿ ಎಂದು ಐದು ಗ್ಯಾರಂಟಿ ಯೋಜನೆ ತಂದಿದ್ದೇವೆ. ಬಿಜೆಪಿಯವರು ಹೋರಾಟ ಮಾಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಸಭೆ ಕೆಡಿಸುವಂತಹ ನೀಚ ಕೆಲಸವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾಡಬಾರದು ಎಂದು ಕಿಡಕಾರಿದರು. ಇದನ್ನೂ ಓದಿ: 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು
ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಸಿಎಂ ಅವರು ಕೈ ಮಾಡಲು ಯತ್ನಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೇನೂ ಗೊತ್ತಿಲ್ಲ. ಹಾಗಾಗಿದ್ದರೆ ಅದು ಸರಿಯಲ್ಲ. ಆದರೂ ಆಡಳಿತದಿಂದ ಬೇಸರ ಆಗಿರಬಹುದು. ಹಾಗಾಗಿ, ಹೀಗೆ ವರ್ತಿಸಿರಬಹುದು ಎಂದು ಹೇಳಿದರು.