`ಕೈ’ ಕಾರ್ಯಕರ್ತೆಯ ಮೇಲೆ ಹೆಚ್.ಎಂ ರೇವಣ್ಣ ಹಲ್ಲೆ

Public TV
1 Min Read
HM Revanna Assault

ಬೆಂಗಳೂರು: ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಎಂ.ರೇವಣ್ಣ (HM Revanna) ಅವರು ಕಾಂಗ್ರೆಸ್ (Congress) ಕಾರ್ಯಕರ್ತೆಯ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.

ಸೋಮವಾರ ಮಧ್ಯಾಹ್ನ ಕುಮಾರಕೃಪಾದಲ್ಲಿ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಮಧ್ಯಾಹ್ನ 3:30ರ ಸುಮಾರಿಗೆ ರೂಂ.ನಂಬರ್ 2ರಲ್ಲಿ ರೇವಣ್ಣ ಊಟ ಮಾಡುತ್ತಿದ್ದರು. ಈ ವೇಳೆ ಅವರನ್ನು ಭೇಟಿಯಾಗಿ ಮಾತನಾಡಿಸಲು ತೆರಳಿದ್ದೆ.ಇದನ್ನೂ ಓದಿ: ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಹೆಚ್‍ಡಿಕೆ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ

ಈ ವೇಳೆ ನನ್ನ ಮೊಬೈಲ್ ಕಸಿದುಕೊಂಡು ನನನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ. ಬಳಿಕ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ರೇವಣ್ಣ ಮಹಿಳೆಯ ಮೊಬೈಲ್ ಕಸಿದುಕೊಳ್ಳುತ್ತಿರುವ ವಿಡಿಯೋ ಲಭ್ಯವಾಗಿದೆ.

ಹಲ್ಲೆ ಪರಿಣಾಮ ಮಹಿಳೆಯ ಕೈ ಮೂಳೆಗೆ ಫ್ಯಾಕ್ಚರ್ ಆಗಿದ್ದು, ಬಳಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎನ್‌ಸಿಆರ್ ದಾಖಲಾಗಿದೆ.ಇದನ್ನೂ ಓದಿ: ಪುತ್ರನ ನಾಮಕರಣ ಸಂಭ್ರಮದ ಫೋಟೋ ಹಂಚಿಕೊಂಡ ಅಂಬಿ ಸೊಸೆ

Share This Article