ಗದಗ: ಗೃಹ ಸಚಿವ ಅರಗ ಜ್ಞಾನೇಂದ್ರರವರಿಗೆ ತಾವು ಒಬ್ಬರು ಸಚಿವರು ಎಂಬ ಜ್ಞಾನವಿರಲಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಇನ್ನೂ ಬಿಜೆಪಿ ಕಾರ್ಯಕರ್ತರಂತೆ ಆಡಯವ ಅವರ ಮಾತು ಹಾಗೂ ವರ್ತನೆ ಸರಿಯಲ್ಲ. ತಾವು ಒಬ್ಬರು ಸಚಿವರು ಎಂಬುದು ಜ್ಞಾನೆಂದ್ರವರಿಗೆ ಜ್ಞಾನವಿರಲಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ
ನಿಮ್ಮ ಮೊದಲ ಹೇಳಿಕೆಯೇ ಪೊಲೀಸ್ ಇಲಾಖೆಗೆ ತಪ್ಪು ಸಂದೇಶವಾಗಿದೆ. ಕೆಟ್ಟ ಶಕ್ತಿಗಳಲ್ಲಿ ಭಯ ಹುಟ್ಟಿಸುವ ಕೆಲಸ ಗೃಹ ಸಚಿವರು ಮಾಡಬೇಕು. ಅದನ್ನು ಬಿಟ್ಟು ಹೆಣ್ಣುಮಕ್ಕಳು ಅಲ್ಲಿ ಹೋಗಿದ್ದು ತಪ್ಪು, ಹಾಗೇ ಹೀಗೆ ಅಂತ ಹೆಣ್ಣು ಮಕ್ಕಳ ಬಗ್ಗೆ ಹಗುರವಾದ ಮಾತುಗಳು ಸರಿಯಲ್ಲ. ಅಲ್ಲದೇ ಆರೋಪಿಗಳ ಬಗ್ಗೆಯೂ ಸಚಿವರ ಹೇಳಿಕೆಗಳು ಬೇಸರ ಮೂಡಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಜಗಳವಾಡಿ ಕ್ಷಮೆ ಕೇಳುವುದರೊಳಗೆ ತಂದೆ ಹೆಣವಾಗಿದ್ದರು: ಅಭಿನವ್
24 ಗಂಟೆನಲ್ಲಿ ಆರೋಪಿ ಬಂಧಿಸುವಂತೆ ಅಧಿಕಾರಿಗಳಿಗೆ ಹೇಳಬೇಕು. ಅದನ್ನು ಬಿಟ್ಟು ತಾವೇ ತಡವಾಗುತ್ತೆ, ನೋಡೋಣ, ಮಾಡೋಣ ಎಂಬ ಹಾರಿಕೆ ಉತ್ತರ ಶೋಭೆ ತರುವಂತಹದಲ್ಲ. ಅತ್ಯಾಚಾರ ಬಗ್ಗೆ ನಿಮ್ಮ ಹಗುರ ಮಾತುಗಳನ್ನು ನಿಲ್ಲಿಸಿ. ನಿಮ್ಮಯ ಹಗುರ ಮಾತು ಮಹಿಳೆಯರಿಗೆ ನಾವು ಅವಮಾನ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.