– ಬಿಜೆಪಿಯಿಂದಲೇ ನಿಂತುಕೊಳ್ಳಿ ಅಂತಾ ಯೋಗೇಶ್ವರ್‌ಗೆ ಹೇಳಿದ್ದೆವು
ಬೆಂಗಳೂರು: ನಿಖಿಲ್ (Nikhil Kumaraswamy) ಸ್ಪರ್ಧೆ ಮಾಡದೆ ಇದ್ದಿದ್ದರೆ ಕುಮಾರಸ್ವಾಮಿ ಮಗ ಹೆದರಿ ಓಡಿ ಹೋದ ಅಂತಿದ್ದರು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹೇಳಿದ್ದಾರೆ.
Advertisement
ವಿಧನಸೌಧದಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಎಂದೂ ಹಿಂಬಾಗಿಲಿನಿಂದ ರಾಜಕಾರಣಕ್ಕೆ ಬಂದಿಲ್ಲ. ಅಧಿಕಾರಕ್ಕೆ ಅಂಟಿ ಕೂರುವ ಕುಟುಂಬ ನಮ್ಮದಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಥಳೀಯರನ್ನೇ ನಿಲ್ಲಿಸ್ತೀವಿ ಅಂತಾ ಹೇಳಿದ್ವಿ. ನಾವು ಯೋಗೇಶ್ವರ್‌ಗೆ ಕೊನೆ ಘಳಿಗೆವರೆಗೂ ಅವಕಾಶ ನೀಡಿದ್ವಿ. ಬಿಜೆಪಿಯಿಂದಲೇ ನಿಂತ್ಕಳಿ ಅಂತಾ ಹೇಳಿದ್ದೆವು. ಆದರೆ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ರು. ಕಾಂಗ್ರೆಸ್‌ಗೆ ಕ್ಯಾಂಡಿಡೇಟ್ ಇಲ್ಲದೆ ಗೋಗರೆದು ನಿಲ್ಲಿಸಿದ್ದಾರೆ. ದಮ್ಮಯ್ಯ, ದಕ್ಕಯ್ಯ ಅಂದು ಯೋಗೇಶ್ವರ್ ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ನಮಗೆ ಮುಖ್ಯ ಅಲ್ಲ: ಪರಮೇಶ್ವರ್
Advertisement
Advertisement
ಅಧಿಕಾರಕ್ಕಾಗಿ ಯಾರ ಮುಂದೆ ಬೇಕಾದರೂ ಕೈಕಾಲಾದ್ರು ಕಟ್ಟುತ್ತಾರೆ. ದೇವೇಗೌಡ್ರು ಕುಟುಂಬ ನಾಶ ಮಾಡುವುದೊಂದೇ ಉದ್ದೇಶ. ನಿಖಿಲ್ ನಿಲ್ಲಿಸದಿದ್ರೆ ಕುಮಾರಸ್ವಾಮಿ ಮಗ ಹೆದರಿ ಹೋದ ಅಂತಾ ಹಬ್ಬಿಸುತ್ತಿದ್ರು. ನಿಖಿಲ್ ಪ್ರಾಮಾಣಿಕವಾಗಿ ಓಡಾಡ್ತಾನೆ, ಗೆಲ್ತಾನೆ. ಜೆಡಿಎಸ್ ಮುಗಿದೇ ಹೋಯ್ತು ಅಂದ್ರು, ಕುಮಾರಣ್ಣ ಕೇಂದ್ರ ಸಚಿವರಾಗಿಲ್ವ? ಇವರಾರಿಂದ ಮೈತ್ರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
Advertisement
ಪ್ರತಿದಿನ ಕತ್ತಲೆ ಆಗುತ್ತೆ ಬೆಳಗಾಗುತ್ತೆ. ಕಾಲ ಚಕ್ರ ಹೀಗೆ ಇರುವುದಿಲ್ಲ. ನಿಖಿಲ್ ನಿಲ್ಲಿಸದಿದ್ರೆ ಕದ್ದು ಓಡಿ ಹೋದ ಅನ್ನುತ್ತಿದ್ರು. ಕಾಂಗ್ರೆಸ್ 14 ತಿಂಗಳ ಸರ್ಕಾರ ಅವರು ಆಗ ಹಾಸನಕ್ಕೆ ಬಂದು ಹಗಲು ರಾತ್ರಿ ಸುತ್ತಾಡಿದ್ರು. ಆದರೂ ಹಾಸನದಲ್ಲಿ ಎಂಎಲ್‌ಎ ಗೆಲ್ಲೋಕಾಯ್ತ? ಆರು ಸ್ಥಾನಗಳನ್ನ ನಾವು ಗೆಲ್ಲಲಿಲ್ವ? ಲೋಕಸಭೆಯಲ್ಲಿ ನಾಲ್ಕು ದಿನ ಇದ್ದಂತೆ ಏನು ಮಾಡಿದ್ರು ಮುಂದೆ ಹೇಳ್ತೇನೆ. ಕಾಲ ಬರುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 113 ಕೋಟಿ ಆಸ್ತಿ ಒಡೆಯ ನಿಖಿಲ್ ಕುಮಾರಸ್ವಾಮಿ – ಪುತ್ರನ ಹೆಸರಲ್ಲಿದೆ 11 ಲಕ್ಷ
ನಿಖಿಲ್ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸೋಲೋ ಗೆಲುವೋ ಅವರು ಧೈರ್ಯ ಮಾಡಿ ಚುನಾವಣೆಗೆ ನಿಂತಿದ್ದಾರೆ. ನಾವು ಎಲ್ಲವನ್ನು ಎದುರಿಸುತ್ತೇವೆ. ರಾತ್ರಿ ‘ಪಬ್ಲಿಕ್ ಟಿವಿ’ ರಂಗನಾಥ್ ಹೇಳಿದ್ರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ನಿಲ್ಲಬೇಕು ಎನ್ನುವುದು ಜನಾಭಿಪ್ರಾಯ ಇತ್ತು ಅಂತಾ. ವಿಪಕ್ಷಗಳು ಏನಾದರು ಆರೋಪ ಮಾಡಲಿ. ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆಲ್ಲಾ ರಿಯಾಕ್ಟ್ ಮಾಡಿದರೆ ನಾನು ಪೊಳ್ಳೆದ್ದು ಹೋಗುತ್ತೇನೆ. ನೂರಕ್ಕೆ ನೂರು ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆಲ್ಲುತ್ತಾರೆ. ನನಗೆ ಸ್ವಲ್ಪ ಮೈ ಹುಷಾರಿಲ್ಲ. ಹುಷಾರಾದರೆ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ.