ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ವಿಚಾರವಾಗಿ ಡಿಸಿ ಸಭೆ ಕರೆದಿದ್ದಾರೆ. ನನ್ನ ಪಿಎಗೆ ಫೋನ್ ಮಾಡಿ ಹೇಳಿದ್ದಾರೆ. ನನಗೆ ಯಾವುದೇ ಲೆಟರ್ ಕೊಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ವಿರುದ್ಧ ಮಾಜಿಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಮಾತನಾಡಿದ ಅವರು, ಡಿಸಿ ಸಭೆಗೆ ಹೋದರೆ ಬೆಲೆ ಕೊಡಲ್ಲ. ಡಿಸಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಬೇಸರ ಹೊರಹಾಕಿದರು. ರಾತ್ರಿ ವೇಳೆ ಹಾಸನ ತಾಲೂಕು ಕಚೇರಿ ಕಟ್ಟಡ ಒಡೆದು ಹಾಕಿದ ಬಗ್ಗೆಯೂ ಅಸಮಾಧಾನ ಹೊರಹಾಕಿದ ರೇವಣ್ಣ ಅವರು, ಡಿಸಿಯವರಿಗೆ ಪುರುಸೊತ್ತಿಲ್ಲ, ರಾತ್ರಿ ವೇಳೆ ಬಿಲ್ಡಿಂಗ್ ಹೊಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಡಿಸಿ ಅನ್ನೋ ಪದ ತೆಗೆಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ
Advertisement
Advertisement
ನಾನು ಒಬ್ಬ ಶಾಸಕನಾಗಿದ್ದೇನೆ. ನನಗೂ ಎರಡು ಹೋಬಳಿ ಬರುತ್ತೆ. ಮಂತ್ರಿ ಹೇಳಿದ್ರು ಅಂತಾರೆ, ಮಂತ್ರಿ ಇವರಿಗೆ ನನಗಲ್ಲ. ಕಟ್ಟಡವನ್ನು ರಾತ್ರಿ ಹೊಡೆಯದು ಏನಿತ್ತು, ಬೆಳಗ್ಗೆ ಹೊಡಿಬೇಕಿತ್ತು. ಹೇಳೋರು, ಕೇಳೋರು ಯಾರು ಇಲ್ಲ ಇವರಿಗೆ. ಅಧಿಕಾರ ಇದೆ ಎಂದು ದರ್ಪ ತೋರಿದ್ರೆ ಹೆಚ್ಚು ದಿನ ನಡೆಯಲ್ಲ. ಪೊಲೀಸ್ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾವೇನು ದನಕಾಯೋನ? ಏನ್ ಯಾವಾಗ್ಲು ಬಿಜೆಪಿ ಇರುತ್ತೆ ಅನ್ಕಂಡಿದ್ದಾರೆ. ನಾನು ಇಪ್ಪತ್ತೈದು ವರ್ಷದಿಂದ ಎಲ್ಲವನ್ನೂ ನೋಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.
Advertisement
Advertisement
ಡಿಸಿ ಆಫೀಸ್ ಹೊಡೆದ್ರೆ ಅದರ ಪರಿಣಾಮ ಬೇರೆ ಆಗುತ್ತೆ. ಜಿಲ್ಲಾಧಿಕಾರಿ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಡಿಸಿ ರಬ್ಬರ್ ಸ್ಟಾಂಪ್ ಇದ್ದಂಗೆ, ಡಿಸಿ ಆಗುವುದಕ್ಕೆ ಅವರಿಗೆ ಯೋಗ್ಯತೆಯಿಲ್ಲ. ಯಾವೋನೋ ಹೇಳ್ದಾ ಕಟ್ಟಡ ಹೊಡುದ್ರು. ಎಷ್ಟು ದಿನ ದಬ್ಬಾಳಿಕೆ ಮಾಡ್ತಾರೆ ಮಾಡ್ಲಿ. ಕೆಲವು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ. ಇವರೆಲ್ಲ ಜನಹಿತ ಕಾಪಾಡುವುದಿಲ್ಲ. ಇವರು ಬರಿ ದುಡ್ಡು ಹೊಡೆಯುತ್ತಾರೆ. ಡಿಸಿ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತೆ ರಾಜ್ಯಪಾಲರು, ಸಿಎಂಗೆ ಮನವಿ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್