ಹಾಸನ: ಗುತ್ತಿಗೆದಾರರಿಂದ ಶೇ. 40 ರಷ್ಟು ಕಮಿಷನ್ ವಸೂಲಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಒತ್ತಾಯಿಸಿದ್ದಾರೆ.
Advertisement
ಹಾಸನದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇದೀಗ ಹೊಸದಾಗಿ ಕೆಲಸ ಮಾಡಿಸಲು ಎಂಜಿನಿಯರುಗಳೇ ಕಾರ್ಯಸೂಚಿ ರೂಪಿಸುತ್ತಾರೆ. ನಂತರ ತಮಗೆ ಬೇಕಾದ ಗುತ್ತಿಗೆದಾರರ ಕೈಲಿ ಕೆಲಸ ಮಾಡಿಸುತ್ತಾರೆ. ನಮ್ಮ ಜಿಲ್ಲೆಯಲ್ಲೇ ಗುತ್ತಿಗೆದಾರರಿಗೆ ನೀಡಬೇಕಾದ ಸುಮಾರು 250 ಕೋಟಿ ರೂಪಾಯಿ ಬಿಲ್ ಪಾವತಿಯಾಗಿಲ್ಲ. ಯಾರು ಕಮಿಷನ್ ಕೊಡುತ್ತಾರೋ ಅವರಿಗೆ ಮಾತ್ರ ಬಿಲ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಕಮಿಷನ್ ಶೇ. 10 ಇದ್ದದ್ದು ಈಗ 30 ಪರ್ಸೆಂಟ್‌ಗೆ ಏರಿದೆ: ಗುತ್ತಿಗೆದಾರ ಕೆಂಪಣ್ಣ ಆರೋಪ
Advertisement
ಎಲ್‍ಒಸಿ ತೆಗೆದುಕೊಳ್ಳುವುದಕ್ಕೆ 10 ರಿಂದ 12 ಪರ್ಸೆಂಟ್, ಕೆಲಸ ತೆಗೆದುಕೊಳ್ಳುವುದಕ್ಕೆ 15 ರಿಂದ 20 ಪರ್ಸೆಂಟ್, ಒಟ್ಟಾರೆ 40 ಪರ್ಸೆಂಟ್‍ವರೆಗೆ ಹಣ ಕೊಡಬೇಕು. ಆ ಹಣ ಯಾರಿಗೆ ಹೋಗುತ್ತಿದೆ ಎಂಬುದನ್ನು ಮುಖ್ಯಮಂತ್ರಿಗಳು ತನಿಖೆಗೆ ವಹಿಸಬೇಕು. ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ. ಹೀಗಾಗಿ ಈ ಬಗ್ಗೆ ಮುಖ್ಯಮಂತ್ರಿಗಳು ಸಿಬಿಐ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ನೀಡಬೇಕು – ಬಿಜೆಪಿ ಸರ್ಕಾರದ ವಿರುದ್ಧವೇ ಪ್ರಧಾನಿಗೆ ಪತ್ರ
Advertisement
Advertisement
ಕಮಿಷನ್ ಹಣ ಯಾರಿಗೆ ಹೋಗುತ್ತಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳೇ ತಿಳಿಸಬೇಕಿದೆ. ನಿಮ್ಮ ಮಂತ್ರಿಮಂಡಲದವರು, ನೀವು ಇದರಲ್ಲಿ ಇಲ್ಲ ಎನ್ನುವುದಾದರೆ ಸಿಬಿಐ ತನಿಖೆ ಮಾಡಿಸಿ. ಅಷ್ಟೇ ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹೆಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.