ಬೆಂಗಳೂರು: ಕುಮಾರಸ್ವಾಮಿಯವರ (H.D Kumaraswamy) ಪಕ್ಷದ ರಾಜಕಾರಣ ಬೇರೆ, ವೈಯುಕ್ತಿಕ ರಾಜಕಾರಣ ಬೇರೆ. ಅವರು ಎರಡೆರಡು ರೀತಿಯ ರಾಜಕಾರಣ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ರಾಜಕಾರಣ ಅವರಿಗೆ ಗೊತ್ತು. ಅವರದ್ದು ವೈಯಕ್ತಿಕ ರಾಜಕಾರಣ ಒಂದು, ಪಾರ್ಟಿ ರಾಜಕಾರಣನೇ ಒಂದು. ನಾನು ಯೋಗೇಶ್ವರ್ ಅವರ ಭೇಟಿ ಮಾಡಿಲ್ಲ. ಅವರ ಜೊತೆ ಮಾತನಾಡಿಯೂ ಇಲ್ಲ. ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಅವರಿಗೆ ಶಾಸಕರಿಗೆ ಕೊಡುವ ಗೌರವ ಕೊಡಲಾಗಿದೆ. ಅಷ್ಟು ಬಿಟ್ಟರೆ ಬೇರೆ ಏನೂ ಇಲ್ಲ. ನನಗೂ ಬೇಕಾದಷ್ಷು ಮಾಹಿತಿ ಇದೆ. ಅವರು ಎನ್‌ಡಿಎ ಇಂದಲೇ ಎಂಎಲ್ಸಿ ಇದ್ದಾರೆ. ಕೆಲವರಿಗೆ ಸಲಹೆ ಕೊಡಬಹುದು. ಅವರಲ್ಲಿ ಗೊಂದಲ ಇರೋದು ಗೊತ್ತಿಲ್ಲ ಎಂದಿದ್ದಾರೆ.
Advertisement
ಜೆಡಿಎಸ್ ಕ್ಷೇತ್ರ ಬಿಜೆಪಿಗೆ ಕೊಟ್ಟರೆ ಜೆಡಿಎಸ್‌ನವರ ಅಸ್ತಿತ್ವ ಇರಲ್ಲ. ಕುಮಾರಸ್ವಾಮಿಯವರು ಅಲ್ಲಿನ ಎಂಎಲ್ಎ ಆಗಿದ್ದರು. ಹಿಂದೆ ಅವರ ಭಾಮೈದನರನ್ನ ಬೇರೆ ಚಿಹ್ನೆಯಿಂದ ಗೆಲ್ಲಿಸಿದ್ದು ಗೊತ್ತಿದೆ. ಜೆಡಿಎಸ್ ವೀಕ್ ಇದೆ ಎನ್ನುವಷ್ಟು ಮೂರ್ಖ ಅಲ್ಲಾ ನಾನು. ಆದರೆ ಕುಮಾರಸ್ವಾಮಿ ಇಷ್ಟು ವೀಕ್ ಆಗಬಾರದಿತ್ತು. ನಾನು ಎನ್‌ಡಿಎ ವಿಚಾರ ಯೋಗೇಶ್ವರ್ ವಿಚಾರಕ್ಕೆ ಹೋಗಲ್ಲ. ಕುಮಾರಸ್ವಾಮಿ ಏನು ಮಾತನಾಡ್ತಾರೆ. ಅವರ ಮಾತಿಗೆ ಅವರೇ ಸ್ಟ್ಯಾಂಡ್ ಕೊಡಲ್ಲ. ಅವರಿಗೆಲ್ಲ ನಾನು ಉತ್ತರ ಕೊಡಲು ಹೋಗಲ್ಲ. ಅದು ಅವರ ಡ್ಯೂಟಿ ಅಥವಾ ಪಕ್ಷದ ತಂತ್ರ ಇರಬಹುದು ಎಂದಿದ್ದಾರೆ.
Advertisement
Advertisement
ಕುಮಾರಸ್ವಾಮಿಯವರು ಪಬ್ಲಿಕ್‌ನಲ್ಲಿ ಒಂದು ಮಾತನಾಡ್ತಾರೆ, ಆಂತರಿಕವಾಗಿ ಒಂದು ಮಾತನಾಡ್ತಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಪಾಳಯದಲ್ಲಿ ನನ್ನದೇ ಮುಖ ನಾನೆ ಅಭ್ಯರ್ಥಿ. ಕುಮಾರಸ್ವಾಮಿ ಎಲ್ಲರ ಹತ್ತಿರ ಮಾತನಾಡಿ ಕೈ ಕಟ್ಟಿ, ಬಿಜೆಪಿ ಅವರನ್ನ ರಿಕ್ವೆಸ್ಟ್ ಮಾಡಿ ಅವರೊಬ್ಬ ಸೆಂಟ್ರಲ್ ಮಿನಿಸ್ಟರ್ ಇಷ್ಟೊಂದು ವೀಕ್ ಅಂತಾ ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ I wish them all the best ಎಂದಿದ್ದಾರೆ.