-ಸ್ಪೆಷಲ್ ಟೀಂ ರಚನೆ ಹಿಂದಿದೆ ಮಹಾತಂತ್ರ!
ಬೆಂಗಳೂರು: ಟೀಕೆ ಟಿಪ್ಪಣಿಗಳ ನಡುವೆ ಸಿಎಂ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಮುಗಿಸಿ ಬಂದಿದ್ದಾರೆ. ಇಂದು ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮತ ಯಾಚಿಸಲಿದ್ದಾರೆ. ಸಿಎಂ ರೆಸಾರ್ಟಿನಲ್ಲಿ ಕಾಲಹರಣ ಮಾಡದೆ ತಮ್ಮದೇ ಆದ ಹೊಸ ಟೀಂ ರಚನೆ ಮಾಡಿಕೊಂಡು ಮೇ 23ರ ಬಳಿಕ ರಾಜಕೀಯ ಬದಲಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಸಿಎಂ ರಚಿಸಿರುವ ಹೊಸ ಟೀಂ ಆರು ಮಂದಿ ಚಾಣಕ್ಯರನ್ನು ಒಳಗೊಂಡಿದೆ. ಈ ತಂಡದ ಸದಸ್ಯರು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪರ ರಾಜಕೀಯ ತಂತ್ರಗಳಿಗೆ ತಿರುಗೇಟು ನೀಡಲು ಸದಾ ಸನ್ನದ್ಧವಾಗಿರಲಿದೆ. ಈ ಟೀಂ ಬಿಎಸ್‍ವೈ ಹಾಗೂ ಸಿದ್ದು ಆಪರೇಷನ್ ಸೀಕ್ರೆಟ್ ಭಂಗಗೊಳಿಸಲು ರಚನೆಯಾಗಿದೆ ಎನ್ನಲಾಗಿದೆ.
Advertisement
Advertisement
ತಂಡ ಹೀಗಿದೆ: ಸಿಎಂ ರಚಿಸಿರುವ ಆರು ಮಂದಿ ಚಾಣಕ್ಯರ ತಂಡದಲ್ಲಿ ಸಚಿವರಾದ ಪುಟ್ಟರಾಜು, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಶಾಸಕ ಸುರೇಶ್‍ಗೌಡ ಇದ್ದಾರೆ. ಟೀಂನ ಎಲ್ಲ ಸದಸ್ಯರು ಬಿಜೆಪಿಯ ಆಪರೇಷನ್ ಹೊಡೆದುರುಳಿಸಲು ಕೆಲಸ ಮಾಡಲಿದ್ದಾರೆ. ವಿಶೇಷವಾಗಿ ಜಿ.ಟಿ.ದೇವೇಗೌಡ, ಹೆಚ್.ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ದೋಸ್ತಿ ನಾಯಕ ಸಿದ್ದರಾಮಯ್ಯರ ತಂತ್ರಗಾರಿಕೆ ಮೇಲೆ ಕಣ್ಣಿಡಲಿದ್ದು, ಸಿದ್ದರಾಮಯ್ಯ ಮತ್ತೆ ಸಿಎಂ ಕೂಗಿಗೆ ಬ್ರೇಕ್ ಹಾಕಲು ಮೂವರು ಕಾರ್ಯಾಚರಣೆಯಲ್ಲಿ ಸಕ್ರಿಯರಾಗಿರುತ್ತಾರೆ ಎಂಬ ಮಾಹಿತಿ ಲಭಿಸಿದೆ.
Advertisement
ಸಿಎಂ ಇಬ್ಬನಿ ಟೀಂ ಮೇ 23ರವರೆಗೆ ಫುಲ್ ಆ್ಯಕ್ಟೀವ್ ಆಗಿ ಕೆಲಸ ಮಾಡಲಿದೆ. ರಾಜ್ಯ ರಾಜಕಾರಣದ ಪ್ರತಿಯೊಂದು ಬೆಳವಣಿಗೆಗಳ ಮೇಲೆ ಕಣ್ಣಿಡಲಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ಸಿಎಂಗೆ ರವಾನಿಸಲಿದೆ. ಮೇ 23ರ ನಂತರವೂ ಬೇರೆ ಬೇರೆ ಆಪರೇಷನ್‍ಗಳ ಮೇಲೆ ಕಣ್ಣಿಡುವುದು, ವಿಫಲಗೊಳಿಲು ತಂಡ ಕೆಲಸಮಾಡಲಿದೆ ಎಂದು ತಿಳಿದು ಬಂದಿದೆ.